ಭಾನುವಾರ, ಅಕ್ಟೋಬರ್ 20, 2019
22 °C

ಸೋಂಪುರ ಗ್ರಾ.ಪಂಗೆ ಆಯ್ಕೆ

Published:
Updated:
Prajavani

ದಾಬಸ್ ಪೇಟೆ: ಸೋಂಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಭಾರತೀಪುರ ಸದಸ್ಯೆ ಲಕ್ಷ್ಮೀದೇವಿ ಆಂಜಿನ ಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

25 ಸದಸ್ಯರನ್ನು ಹೊಂದಿರುವ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ವೆಂಕಟಲಕ್ಷ್ಮಮ್ಮ ವಿರುದ್ಧ 22 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ನೂತನ ಅಧ್ಯಕ್ಷರ ಆಯ್ಕೆಗೆ ಸರ್ಕಾರ ಶುಕ್ರವಾರ ಸಮಯ ನಿಗದಿಗೊಳಿಸಿತ್ತು. ಅವಿಶ್ವಾಸದ ಪರ ಮತ ಚಲಾಯಿಸಿದ್ದ 22 ಸದಸ್ಯರು ಹಾಜರಿದ್ದು, ಲಕ್ಷ್ಮೀದೇವಿ ಆಂಜಿನ ಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

Post Comments (+)