ಸೋಮವಾರ, ಅಕ್ಟೋಬರ್ 21, 2019
22 °C
ಆಲೂರು: ಹುಣಸವಳ್ಳಿ ಸಮೀಪ ಯಗಚಿ ನದಿಯಲ್ಲಿ ಮುಳುಗಿ ಸಾವು

ಈಜಲು ಹೋಗಿ ಮೂವರು ನೀರುಪಾಲು

Published:
Updated:

ಆಲೂರು: ಹುಣಸುವಳ್ಳಿ ಗ್ರಾಮದ ಸಮೀಪ ಹಾದು ಹೋಗಿರುವ ಯಗಚಿ ನದಿಯಲ್ಲಿ ಮಂಗಳವಾರ ಈಜಾಲು ಹೋಗಿದ್ದ ಐವರು ಯುವಕರಲ್ಲಿ ಮೂವರು ನೀರುಪಾಲಾಗಿದ್ದಾರೆ.

ಹುಣಸವಳ್ಳಿ ಗ್ರಾಮದ ನಿವಾಸಿ ರತನ್ (21), ದೊಡ್ಡ ಕಣಗಾಲು ಗ್ರಾಮದ ಭೀಮಣ್ಣ(24) ಮನು (22) ಮೃತಪಟ್ಟವರು.

ಹುಣಸವಳ್ಳಿಯ ಸಂಜಯ್ (22) ದೊಡ್ಡ ಕಣಗಾಲ್ ಗ್ರಾಮದ ನಿವಾಸಿ ಧನು (20) ಅಸ್ವಸ್ಥಗೊಂಡಿದ್ದು ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಗಿರೀಶ್ ಹಾಗೂ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Post Comments (+)