ಶಾಲೆ ಕಟ್ಟಲು ಸಾಂಸ್ಕೃತಿಕ ಸಂಜೆ

7

ಶಾಲೆ ಕಟ್ಟಲು ಸಾಂಸ್ಕೃತಿಕ ಸಂಜೆ

Published:
Updated:

ಬೆಂಗಳೂರು: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ವತಿಯಿಂದ ‘ಯೋಧ ನಮನ, ಗೀತ–ನೃತ್ಯ ಸಮರ್ಪಣ ಹಾಗೂ ಆದರ್ಶರತ್ನ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವನ್ನು ಬಸವನಗುಡಿಯ ಗಾಯನ ಸಮಾಜದಲ್ಲಿ ಅ. 14ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಯೋಧರಿಗೆ ಸಮರ್ಪಿಸಲಾಗಿದೆ. ಜತೆಗೆ ಪ್ರವಾಹದಿಂದ ಹಾನಿಗೆ ಒಳಗಾದ ಕೊಡಗಿನ ಸರ್ಕಾರಿ ಶಾಲೆಯೊಂದರ ಪುನರ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಅಕಾಡೆಮಿಯ ಕಲಾವಿದರು ಇತ್ತೀಚೆಗೆ ನಡೆಸಿಕೊಟ್ಟ ಕಾರ್ಯಕ್ರಮಗಳಿಂದ ಪಡೆದ ಸಂಭಾವನೆಯನ್ನು ಶಾಲೆಗಾಗಿ ನೀಡುತ್ತಿದ್ದಾರೆ. ಭಾಗವಹಿಸುವ ಸಭಿಕರು ಇದಕ್ಕೆ ಕೈಜೋಡಿಸಲು ಅವಕಾಶವಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಅಣ್ಣಾ ವಿ.ವಿ ಕುಲಪತಿ ಪ್ರೊ.ಎಂ.ಕೆ.ಸೂರಪ್ಪ, ಪಿ.ಇ.ಎಸ್‌. ವಿ.ವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ಅವರಿಗೆ ಇದೇ ವೇಳೆ ‘ಆದರ್ಶರತ್ನ ಪ್ರಶಸ್ತಿ–2018’ ಪ್ರದಾನ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !