ಸೋಮವಾರ, ನವೆಂಬರ್ 18, 2019
29 °C

ಲಾಂಚ್‌ಗಳ ಮುಖಾಮುಖಿ ಡಿಕ್ಕಿ

Published:
Updated:
Prajavani

ತುಮರಿ: ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿಗೆ ಸಂಪರ್ಕ ಕಲ್ಪಿಸುವ ಎರಡು ಲಾಂಚ್‌ಗಳು ಬುಧವಾರ ಮುಖಾಮುಖಿ ಡಿಕ್ಕಿಯಾಗಿವೆ.

ಎರಡು ಲಾಂಚ್‌ಗಳಲ್ಲಿ ಒಂದನ್ನು ದುರಸ್ತಿ ಕಾರಣಕ್ಕಾಗಿ ಕೆಲವು ದಿನಗಳಿಂದ ನಿಲುಗಡೆ ಮಾಡಲಾಗಿತ್ತು. ಆ ಲಾಂಚ್‌ ಅನ್ನು ಆಗತಾನೇ ದುರಸ್ತಿ ಮಾಡಿ ಚಾಲನೆ ನೀಡಲಾಗಿತ್ತು. ಆದರೆ, ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ಲಾಂಚ್‌ನ ಸ್ಟೇರಿಂಗ್ ಜಾಮ್ ಆಗಿದ್ದರಿಂದ ಹೀಗೆ ಆಗಿದೆ. ಇದರಿಂದ ಲಾಂಚ್‌ನ ಶೀಟ್ ಕೊಂಚ ಮುರಿದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಚಾಲಕರಾದ ಸುನೀಲ್ ಹಾಗೂ ಮಂಜಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಸಿಗಂದೂರು ದೇವಸ್ಥಾನಕ್ಕೆ ದರ್ಶನ ಪಡೆಯಲು ಎರಡು ಲಾಂಚ್‌ಗಳಲ್ಲಿ 200ಕ್ಕೂ ಹೆಚ್ಚು ಭಕ್ತರು ಇದ್ದರು. ಸ್ಥಳೀಯರೂ ಪ್ರಯಾಣ ಮಾಡುತ್ತಿದ್ದರು. ಯಾರಿಗೂ ತೊಂದರೆಯಾಗಿಲ್ಲ. 

ಮಿಶ್ರ ಪ್ರತಿಕ್ರಿಯೆ: ಘಟನೆಯಲ್ಲಿ ಚಾಲಕರ ಯಾವುದೇ ತಪ್ಪು ಇಲ್ಲ. ಲಾಂಚ್‌ಗಳು ಹಳೆಯದಾಗಿರುವುದೇ ಇದಕ್ಕೆ ಕಾರಣ ಎಂದು ಕೆಲವು ಸ್ಥಳೀಯರು ಆಗ್ರಹಿಸಿದರು. ಇಬ್ಬರಿಗೆ ಮಾತ್ರ ಚಾಲನಾ ಪರವಾನಗಿ ಇದೆ. ಕೆಲವೊಮ್ಮೆ ಅಲ್ಲಿ ಕೆಲಸ ಮಾಡುವವರು ಚಲಾಯಿಸುತ್ತಾರೆ. ಇದು ಸಮಸ್ಯೆಗೆ ಕಾರಣವಾಗಿದೆ ಎಂದು ಕೆಲವು ಮುಖಂಡರು ದೂರಿದರು.

ಪ್ರತಿಕ್ರಿಯಿಸಿ (+)