ಅಪಘಾತದಲ್ಲಿ ಕಾರ್ಮಿಕ ಸಾವು

7

ಅಪಘಾತದಲ್ಲಿ ಕಾರ್ಮಿಕ ಸಾವು

Published:
Updated:

ಬೆಂಗಳೂರು: ಜಾಲಹಳ್ಳಿಯ ಟಿವಿಎಸ್ ಕ್ರಾಸ್‌ನಲ್ಲಿ ಭಾನುವಾರ ರಾತ್ರಿ 7.45 ಗಂಟೆಯಲ್ಲಿ ರಸ್ತೆ ದಾಟುವ ವೇಳೆಯಲ್ಲಿ ಟೆಂಪೊ ಗುದ್ದಿದ್ದರಿಂದ ಮುಕೇಶ್ (35) ಎಂಬುವರು ಮೃತಪಟ್ಟಿದ್ದಾರೆ.

ಬಿಹಾರದ ಮುಖೇಶ್‌ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಚೊಕ್ಕಸಂದ್ರದಲ್ಲಿ ವಾಸವಿದ್ದು, ಪೀಣ್ಯದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 

ಮನೆಗೆ ವಾಪಸಾಗುವಾಗ ಅಪಘಾತ ನಡೆದು, ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಚಾಲಕ ಜಗದೀಶ್‌ನನ್ನು ವಶಕ್ಕೆ ಪಡೆದು, ಟೆಂಪೊ ಜಪ್ತಿ ಮಾಡಲಾಗಿದೆ’ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !