ಮಂಗಳವಾರ, ನವೆಂಬರ್ 19, 2019
29 °C
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ * ಆಟೊ ಚಾಲಕನಿಗೆ ಗಾಯ

ಅಡ್ಡಾದಿಡ್ಡಿ ಕಾರು ಚಲಾಯಿಸಿದ ಆರ್‌ಟಿಒ

Published:
Updated:

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಮಂಜುನಾಥ್‌ ಗುರುವಾರಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಆಟೊಗೆ ಗುದ್ದಿಸಿದ್ದು, ಅವಘಡದಲ್ಲಿ ಆಟೊ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಆರ್‌ಟಿಒ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೊ ಚಾಲಕ ಇಮ್ರಾನ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಚಂದಾಪುರದ ಆರ್‌ಟಿಒ ಆಗಿರುವ ಮಂಜುನಾಥ್, ಕಚೇರಿಯಿಂದ ಮನೆಗೆ ಕಾರಿನಲ್ಲಿ ಹೊರಟಿದ್ದರು. ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದ ರಸ್ತೆಯಲ್ಲಿ ಆಟೊಗೆ ಗುದ್ದಿಸಿದ್ದರು. ಆಟೊ ಉರುಳಿಬಿದ್ದಿತ್ತು. ರಕ್ಷಣೆಗೆ ಬಂದ ಸ್ಥಳೀಯರು ಚಾಲಕ ಇಮ್ರಾನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಆರ್‌ಟಿಒಗೆ ತರಾಟೆ: ಸ್ಥಳದಲ್ಲಿ ಸೇರಿದ್ದ ಜನ, ಆರ್‌ಟಿಒಗೆ ಸುತ್ತು ವರೆದು ತರಾಟೆಗೆ ತೆಗೆದುಕೊಂಡರು.

‘ಸಂಚಾರ ನಿಯಮ ಪಾಲಿಸ ಬೇಕಾದ ನೀವೇ ಅಡ್ಡಾದಿಡ್ಡಿ ಕಾರು ಓಡಿಸಿದರೆ ಹೇಗೆ’ ಎಂದು ಪ್ರಶ್ನಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ಮಂಜುನಾಥ್ ಅವ ರನ್ನು ವಶಕ್ಕೆ ಪಡೆದು ಠಾಣೆಗೆ ಕರೆದು ಒಯ್ದರು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.

‘ನಿರ್ಲಕ್ಷ್ಯದ ಚಾಲನೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)