ಮಾದಕ ವಸ್ತು ಮಾರಾಟ: ಆಫ್ರಿಕಾ ಪ್ರಜೆ ಬಂಧನ

7
ಕೊತ್ತನೂರು ಪೊಲೀಸರಿಂದ ಆಫ್ರಿಕಾ ಪ್ರಜೆ ಬಂಧನ

ಮಾದಕ ವಸ್ತು ಮಾರಾಟ: ಆಫ್ರಿಕಾ ಪ್ರಜೆ ಬಂಧನ

Published:
Updated:
Prajavani

ಬೆಂಗಳೂರು: ಕೊತ್ತನೂರು ಸಮೀಪದ ದೊಡ್ಡಗುಬ್ಬಿ ಮುಖ್ಯರಸ್ತೆಯಲ್ಲಿರುವ ವಿಜಯ ವಿಠ್ಠಲ ಕಾಲೇಜು ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಫ್ರಿಕಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅಂಥೋನಿ ತೆಬೇಚುಕ್ವು (36) ಬಂಧಿತ. ಆತನಿಂದ ₹80 ಸಾವಿರ ಮೌಲ್ಯದ ಗಾಂಜಾ ಮತ್ತು ನೀಲಿ ಬಣ್ಣದ 32 ಎಂಡಿಎಂಎನ್ ಮಾತ್ರೆಗಳು ಹಾಗೂ ₹1,500 ನಗದು ಜಪ್ತಿ ಮಾಡಲಾಗಿದೆ.

‘ರಾಮಮೂರ್ತಿನಗರದ ಟಿ.ಸಿ.ಪಾಳ್ಯ ಮುಖ್ಯರಸ್ತೆ ಬಳಿಯ ಕನಕ ನಗರದಲ್ಲಿ ವಾಸವಿದ್ದ ಆರೋಪಿ, ಹಲವು ತಿಂಗಳಿನಿಂದ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಜ. 13ರಂದು ಸಂಜೆ 5.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜು ಬಳಿ ಬಂದಿದ್ದ ಆತ, ಪೊಟ್ಟಣಗಳಲ್ಲಿ ಗಾಂಜಾ ಹಾಗೂ ಎಂಡಿಎಂಎನ್ ಮಾತ್ರೆಗಳನ್ನು ಮಾರುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಮಾಹಿತಿ ಸಿಗುತ್ತಿದ್ದಂತೆಯೇ ಇನ್‌ಸ್ಪೆಕ್ಟರ್‌ ಎಂ.ಎಲ್.ಸುಬ್ರಮಣ್ಯಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು’ ಎಂದರು.

‘ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡಲು ಆರೋಪಿ ಬಂದಿದ್ದನೆಂದು ಗೊತ್ತಾಗಿದೆ. ಮಾದಕವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ಜೊತೆ ಹಲವರು ಇದೇ ಕೆಲಸದಲ್ಲಿ ನಿರತರಾಗಿರುವ ಮಾಹಿತಿ ಇದ್ದು, ಅವರನ್ನೂ ಪತ್ತೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !