ಶುಕ್ರವಾರ, ಸೆಪ್ಟೆಂಬರ್ 20, 2019
27 °C

ವಿಮಾನ 8 ಗಂಟೆ ವಿಳಂಬ– ಪ್ರಯಾಣಿಕರ ಪಡಿಪಾಟಲು

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್‌) ಪಾಟ್ನಾಗೆ ಹೊರಟಿದ್ದ ಗೋ ಏರ್‌ (G8 373) ವಿಮಾನವು ತಾಂತ್ರಿಕ ದೋಷದಿಂದ ಮಂಗಳವಾರ ಎಂಟು ಗಂಟೆ ತಡವಾಗಿ ತಲುಪಿತು. 177ಮಂದಿ ಪ್ರಯಾಣಿಕರು ಇದರಿಂದಾಗಿ ಸಮಸ್ಯೆ ಅನುಭವಿಸಿದರು.

ಮಂಗಳವಾರ ಬೆಳಿಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ತಾಂತ್ರಿಕ ದೋಷದಿಂದಾಗಿ ರಾಂಚಿ ವಿಮಾನ ನಿಲ್ದಾಣದಲ್ಲಿ ನಿಂತಿತು. ದೆಹಲಿ ಹಾಗೂ ಮುಂಬೈನಿಂದ ಅಗತ್ಯ ಬಿಡಿ ಭಾಗಗಳನ್ನು ತರಿಸಿಕೊಂಡು ಹೊರಟ ವಿಮಾನ ಪಾಟ್ನಾ ನಿಲ್ದಾಣವನ್ನು ರಾತ್ರಿ 8 ಗಂಟೆಗೆ ತಲುಪಿಸಿತು. 

‘ನಿಮ್ಮ ಸಿಬ್ಬಂದಿಗೆ  ಪ್ರಯಾಣಿಕರ ಪರಿಸ್ಥಿತಿಯೇ ಅರ್ಥವಾಗಿಲ್ಲ. ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗಿದೆ’ ಎಂದು ಟ್ವೀಟ್‌ ಮೂಲಕ ಪ್ರಯಾಣಿಕರೊಬ್ಬರು ಗೋ ಏರ್‌ ವಿಮಾನಯಾನ ಸಂಸ್ಥೆ ವಿರುದ್ಧ ಬೇಸರ ವ್ಯಕ್ತಪಡಿಸಿದರು.

Post Comments (+)