₹2.09 ಕೋಟಿ ಮೊತ್ತದ ವಿದೇಶಿ ನೋಟು ಜಪ್ತಿ

7

₹2.09 ಕೋಟಿ ಮೊತ್ತದ ವಿದೇಶಿ ನೋಟು ಜಪ್ತಿ

Published:
Updated:
Prajavani

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ₹2.09 ಕೋಟಿ ಮೊತ್ತದ ವಿದೇಶಿ ನೋಟುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಇಂಡೋನೇಷ್ಯಾ ಪಾಸ್‌ಪೋರ್ಟ್‌ ಹೊಂದಿದ್ದ 56 ವರ್ಷದ ವ್ಯಕ್ತಿ, ವಿಮಾನದ ಮೂಲಕ ಬ್ಯಾಂಕಾಕ್‌ಗೆ ತೆರಳಲು ನಿಲ್ದಾಣಕ್ಕೆ ಬಂದಿದ್ದ. ತಪಾಸಣೆ ವೇಳೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ’ ಎಂದು ಕಸ್ಟಮ್ಸ್‌ ಮೂಲಗಳು ತಿಳಿಸಿವೆ.

‘ಆರೋಪಿಯ ಬ್ಯಾಗ್‌ನಲ್ಲಿ ಕಪ್ಪು ಬಣ್ಣದ ಬಟ್ಟೆ ಕಂಡಿತ್ತು. ಅದನ್ನು ಬಿಚ್ಚಿ ನೋಡಿದಾಗ ವಿದೇಶಿ ನೋಟುಗಳು ಸಿಕ್ಕವು. ಆ ನೋಟುಗಳನ್ನು ಆತ ಯಾರಿಗೆ ಕೊಡಲು ಒಯ್ಯುತ್ತಿದ್ದ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’.

‘ಡಾಲರ್‌, ಪೌಂಡ್ ಸೇರಿದಂತೆ 14 ದೇಶಗಳ ಕರೆನ್ಸಿಗಳು ಆತನ ಬಳಿ ಸಿಕ್ಕಿವೆ. ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಆರೋಪಿ, ಸ್ಥಳೀಯ ವ್ಯಕ್ತಿಯಿಂದ ನೋಟುಗಳನ್ನು ಪಡೆದಿರಬಹುದು. ಆ ಬಗ್ಗೆ ಖಚಿತ ಮಾಹಿತಿ ಪಡೆಯಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದೇವೆ’ ಎಂದು ಮೂಲಗಳು ಹೇಳಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !