ವಿಮಾನಗಳ ಹಾರಾಟ ಒಂದು ಗಂಟೆ ಸ್ಥಗಿತ

7
ಕೆಐಎ ಸುತ್ತಮುತ್ತ ಬೆಳಿಗ್ಗೆ ದಟ್ಟ ಮಂಜು

ವಿಮಾನಗಳ ಹಾರಾಟ ಒಂದು ಗಂಟೆ ಸ್ಥಗಿತ

Published:
Updated:
Prajavani

ಬೆಂಗಳೂರು: ನಗರದಲ್ಲಿ ಗುರುವಾರ ನಸುಕಿನಲ್ಲಿ ಮಂಜು ಕವಿದ ವಾತಾವರಣದ ಕಾರಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನಗಳ ಹಾರಾಟವನ್ನು ಒಂದು ಗಂಟೆ ಸ್ಥಗಿತಗೊಳಿಸಲಾಗಿತ್ತು.

ವಿಮಾನ ಸಂಚಾರ ನಿಯಂತ್ರಣ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಸಿಬ್ಬಂದಿ ಸೂಚನೆಯಂತೆ ಬೆಳಿಗ್ಗೆ 5.10ರಿಂದ ಬೆಳಿಗ್ಗೆ 9.36ರ ಅವಧಿಯಲ್ಲಿ ವಿಮಾನಗಳ ಟೇಕಾಫ್‌ ಹಾಗೂ ಲ್ಯಾಂಡಿಂಗ್‌ ತಡವಾಯಿತು.

ಅದರ ನಡುವೆಯೇ ಬೆಳಿಗ್ಗೆ 6.46ರಿಂದ 7.53ರವರೆಗೆ ರನ್‌ವೇಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಆ ವೇಳೆಯಲ್ಲಿ ಯಾವುದೇ ವಿಮಾನಗಳು ಹಾರಾಟ ನಡೆಸಲಿಲ್ಲ. ಬೇರೆ ಊರುಗಳಿಗೆ ಹೋಗಲು ಬಂದಿದ್ದ ಪ್ರಯಾಣಿಕರು, ನಿಲ್ದಾಣದಲ್ಲೇ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

58 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ದಟ್ಟ ಮಂಜಿನಿಂದಾಗಿ 58 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. 

ನಿಲ್ದಾಣದಿಂದ ಹೊರಡಬೇಕಿದ್ದ 48 ವಿಮಾನಗಳು, ತಡವಾಗಿ ಹಾರಾಟ ನಡೆಸಿದವು. ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ 10 ವಿಮಾನಗಳು ತಡವಾಗಿ ಬಂದವು. ಕೆಐಎಗೆ ಬರಬೇಕಿದ್ದ 3 ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಚೆನ್ನೈ ನಿಲ್ದಾಣಕ್ಕೆ ಕಳುಹಿಸಲಾಯಿತು. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !