ಭಾನುವಾರ, ಅಕ್ಟೋಬರ್ 20, 2019
22 °C

ವಿಮಾನ ನಿಲ್ದಾಣ: ಪರ್ಯಾಯ ಮಾರ್ಗ ಬಳಕೆಗೆ ನಿರ್ಬಂಧ

Published:
Updated:
Prajavani

ಬೆಂಗಳೂರು: ನಗರದ ವಿವಿಧ ಕಡೆಗಳಿಂದ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್‌ ಚಾಲಕರು ಪರ್ಯಾಯ ಮಾರ್ಗಗಳಲ್ಲಿ (ಟೋಲ್‌ ಇಲ್ಲದ ರಸ್ತೆ) ಸಂಚರಿಸಬಾರದು ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಒಬ್ಬಂಟಿಯಾಗಿ ವಿಮಾನ ನಿಲ್ದಾಣ ಗಳಿಗೆ ತೆರಳುವ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಉದ್ದೇಶದಿಂದ ಕಮಿಷನರ್‌ ಈ ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕೋಲ್ಕತ್ತದ ಮಹಿಳೆಯೊಬ್ಬರನ್ನು ದರೋಡೆ ಮಾಡುವ ಉದ್ದೇಶದಿಂದ ಪರ್ಯಾಯ ಮಾರ್ಗದಲ್ಲಿ ಕರೆದೊಯ್ದಿದ್ದ ಕ್ಯಾಬ್‌ ಚಾಲಕ ಆಕೆಯನ್ನು ಕೊಲೆ ಮಾಡಿದ ಘಟನೆ ಜುಲೈ 31ರಂದು ನಡೆದಿತ್ತು.

‘ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಕಾರಣಕ್ಕೆ ಸಂಜೆ 7ರಿಂದ ಬೆಳಿಗ್ಗೆ 7ರ  ಅವಧಿಯಲ್ಲಿ ವಿಮಾನ ನಿಲ್ದಾಣಕ್ಕೆ ಒಳರಸ್ತೆಗಳ ಮೂಲಕ ಕ್ಯಾಬ್‌ ಚಾಲಕರು ತೆರಳ ಬಾರದು’ ಎಂದೂ ಅವರು ಹೇಳಿದ್ದಾರೆ.

Post Comments (+)