ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರದ ಮಧ್ಯೆ ಸಂಗೀತದ ಇಂಪು

ತಂಡದ 26 ಸದಸ್ಯರು ಭಾಗಿ
Last Updated 22 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಡೆ ವಿಮಾನಗಳು ತಮ್ಮ ಅಬ್ಬರದಿಂದ ಪ್ರೇಕ್ಷಕರ ಕಿವಿ ಕೊರೆಯುತ್ತಿದ್ದರೆ, ಮತ್ತೊಂದೆಡೆ ಅಮೆರಿಕದ ‘ಯುನೈಟೆಡ್ ಸ್ಟೇಟ್ ಏರ್ ಫೋರ್ಸ್’ (ಯುಎಸ್‌ಎಎಫ್) ಹಾಗೂ ಭಾರತ ವಾಯುಪಡೆಯ ‘ಏರ್ ವಾರಿಯರ್ಸ್ ಸಿಂಫೋನಿ ಆರ್ಕೇಸ್ಟ್ರಾ’ (ಎಡಬ್ಲ್ಯುಎಸ್‌ಒ) ತಂಡಗಳು ಗಾಯನದ ಮೂಲಕ ಇಂಪು ನೀಡುತ್ತಿವೆ.

ವಾಯುನೆಲೆಯಲ್ಲಿ ಫೆ.20ರಿಂದಲೂ ಈ ಗಾಯಕರು ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ. ಎರಡೂ ದೇಶಗಳ ರಾಷ್ಟ್ರಗೀತೆ ಮೂಲಕ ಶುರುವಾಗುವ ಕಾರ್ಯಕ್ರಮ ಸಂಜೆ 5 ಗಂಟೆವರೆಗೂ ನಡೆಯುತ್ತಿದೆ. ದೇಶದ ಮಹತ್ವ ಸಾರುವ 70–80ರ ದಶಕದ ಹಾಡುಗಳನ್ನೇ ಆಡುವ ಮೂಲಕ ಇವರು ಸಂಗೀತ ಪ್ರಿಯರನ್ನು ವೇದಿಕೆ ಮುಂದೆ ನಿಲ್ಲಿಸಿಕೊಳ್ಳುತ್ತಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಯುಎಸ್‌ಎಎಫ್ ಬ್ಯಾಂಡ್‌ನ ಕ್ರಿಸ್ಟಿನ್ ಫೋಲೇ, ‘ಜನರನ್ನ ಸೆಳೆಯಲು ಸಂಗೀತ ಸುಲಭ ಮಾರ್ಗ. ಈವರೆಗೂ 2,500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದೇವೆ. ಆದರೂ ಉತ್ಸಾಹ ಕಡಿಮೆ ಆಗಿಲ್ಲ. ಸಂಗೀತಕ್ಕೆ ಇರುವ ತಾಕತ್ತು ಅದು. ಈ ಪ್ರದರ್ಶನದಲ್ಲಿ ನಮ್ಮ ತಂಡದಿಂದ 26 ಸದಸ್ಯರು ಪಾಲ್ಗೊಂಡಿದ್ದೇವೆ’ ಎಂದು ಅವರು ತಿಳಿಸಿದರು.

ಸಾರ್ವಜನಿಕರಿಗೆ ಪ್ರವೇಶ
ವೈಮಾನಿಕ ಪ್ರದರ್ಶನ ವೀಕ್ಷಿಸಲು ಶನಿವಾರ ಹಾಗೂ ಭಾನುವಾರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ಪ್ರವೇಶ ದ್ವಾರಗಳು ತೆರೆಯಲಿವೆ. ಪ್ರದರ್ಶನ ಶುರುವಾಗುವ ಒಂದು ತಾಸು ಮುಂಚಿತವಾಗಿ ಜನ ತಪಾಸಣೆ ಮಾಡಿಸಿಕೊಂಡು ಒಳಗೆ ಪ್ರವೇಶಿಸಬೇಕು. ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT