ಪ್ರಸನ್ನ ಅವರಿಗೆ ‘ಚಾಕ್ಯಾರ್ ಪುರಸ್ಕಾರ’

7

ಪ್ರಸನ್ನ ಅವರಿಗೆ ‘ಚಾಕ್ಯಾರ್ ಪುರಸ್ಕಾರ’

Published:
Updated:
Prajavani

ಬೆಂಗಳೂರು: ರಂಗ ನಿರ್ದೇಶಕ ಪ್ರಸನ್ನ ಅವರು ಕೇರಳ ಸಂಗೀತ ನಾಟಕ ಅಕಾಡೆಮಿಯು ಕೊಡಮಾಡುವ ಪ್ರತಿಷ್ಠಿತ ‘ಅಮ್ಮನ್ನೂರ್ ಮಾಧವನ್ ಚಾಕ್ಯಾರ್ ಪುರಸ್ಕಾರ’ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 3 ಲಕ್ಷ ನಗದು ಒಳಗೊಂಡಿದೆ.

ಈ ಹಿಂದೆ ಬಾದಲ್‌ ಸರ್ಕಾರ್‌, ಸಾಬಿತ್ರಿ ಹೈಸ್ನಂ, ಗಿರೀಶ ಕಾರ್ನಾಡ ಅವರಿಗೆ ಈ ಪ್ರಶಸ್ತಿ ಸಂದಿದೆ.

ಜ.20 ರಂದು ಸಂಜೆ 5ಕ್ಕೆ ತ್ರಿಶೂರ್‌ನಲ್ಲಿ ನಡೆಯಲಿರುವ ‘ಕೇರಳ ಅಂತರರಾಷ್ಟ್ರೀಯ ನಾಟಕ ಉತ್ಸವ (ಇಟ್ಫಾಕ್)’ ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !