ಹುಬ್ಬಳ್ಳಿ ಆಮ್‌ವೇ ಇಂಡಿಯಾ ಮಳಿಗೆ ಉದ್ಘಾಟನೆ

7

ಹುಬ್ಬಳ್ಳಿ ಆಮ್‌ವೇ ಇಂಡಿಯಾ ಮಳಿಗೆ ಉದ್ಘಾಟನೆ

Published:
Updated:
Deccan Herald

ಹುಬ್ಬಳ್ಳಿ: ಅತಿವೇಗವಾಗಿ ಮಾರಾಟವಾಗುವ ಗ್ರಾಹಕ ಸಾಮಾಗ್ರಿ (ಎಫ್‌ಎಂಜಿಸಿ) ಮಾರಾಟ ಕಂಪನಿ ಆಮ್‌ವೇ ಹುಬ್ಬಳ್ಳಿಯ ವಿದ್ಯಾನಗರದ ಮಾರ್ವೆಲ್ ಆರ್ಟಿಜಾ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಮಾರಾಟ ಮಳಿಗೆ (ಪಿಕ್‌ ಅಂಡ್ ಪೇ) ಶುಕ್ರವಾರ ಆರಂಭಿಸಿತು.

ಕಾರ್ಯಕ್ರಮದಲ್ಲಿ ಮಾನತನಾಡಿದ ಆಮ್‌ವೇ ಇಂಡಿಯಾದ ಉತ್ತರ– ದಕ್ಷಿಣ ವಲಯ ಹಿರಿಯ ಉಪಾಧ್ಯಕ್ಷ ಗುರುಚರಣ್ ಚೀಮಾ, ‘ನಮ್ಮ ಉತ್ಪನ್ನಗಳಿಗೆ ರಾಜ್ಯದ ಮಹಾನಗರಗಳಲ್ಲಿ ಒಂದಾಗಿರುವ ಹುಬ್ಬಳ್ಳಿಯಲ್ಲಿ ಒಳ್ಳೆಯ ಬೇಡಿಕೆ ಇದೆ. ಪ್ರಮುಖ ಉತ್ಪನ್ನಗಳಿಗೆ ಇಲ್ಲಿನ ಗ್ರಾಹಕರಿಂದ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ನೇರ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದೆ. ಹುಬ್ಬಳ್ಳಿ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕದಲ್ಲಿ ವಹಿವಾಟು ಹೆಚ್ಚಾಗಲಿದೆ’ ಎಂದು ಹೇಳಿದರು.

ಉದ್ಯಮ ಪಾಲುದಾರ ಕಾಲ ಗೌಡ್ ಮಾತನಾಡಿ, ‘ಜಗತ್ತಿನಲ್ಲಿ ಸ್ಥಿರವಾಗಿರುವುದು ಬದಲಾವಣೆ ಮಾತ್ರ. ಕಾಲ ಕಾಲಕ್ಕೆ ಆಗುವ ಬದಲಾವಣೆಗೆ ಹೊಂದಿಕೊಳ್ಳಬೇಕಾದದ್ದು ಅನಿವಾರ್ಯ. ಆಮ್‌ ವೇ ಪಿಕ್ ಅಂಡ್ ಪೇ ಸ್ಟೋರ್ ಮಳಿಗೆ ಅತ್ಯುತ್ತಮ ವಾಣಿಜ್ಯ ವಹಿವಾಟು ಕೇಂದ್ರದಲ್ಲಿದ್ದು,  ವ್ಯವಹಾರ ವೃದ್ಧಿಸುವ ನಿರೀಕ್ಷೆ ಇದೆ’ ಎಂದರು. ಕಂಪನಿಯ ಆನಂದ್ ಭಾರ್ಗವ್, ಪ್ರಭು ಹಿರೇಮಠ್, ಅನುಪಮಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !