ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಂದು ಅಂಗನವಾಡಿ ನೌಕರರ ಪ್ರತಿಭಟನೆ

Last Updated 17 ನವೆಂಬರ್ 2018, 18:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ನ. 30ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಮಾಧ್ಯಮಗೋಷ್ಠಿಯಲ್ಲಿ ಮಂಡಳಿಯ ಕಾರ್ಯದರ್ಶಿ ಬಿ. ನಾಗರತ್ನಮ್ಮ ಈ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಬಹುತೇಕಜಿಲ್ಲೆಗಳಲ್ಲಿಕಾರ್ಯಕರ್ತೆಯರಿಗೆ ಮೂರರಿಂದ 6 ತಿಂಗಳವರೆಗಿನ ಗೌರವಧನ ಪಾವತಿಗೆ ಬಾಕಿಯಿದೆ. ಕೇಂದ್ರ ಸರ್ಕಾರದ ಗೌರವಧನವೂ ಬಂದಿಲ್ಲ. ಹೀಗಾದರೆ ಜೀವನ ಸಾಗಿಸುವುದು ಹೇಗೆ?’ ಎಂದು ನೋವಿನಿಂದ ಪ್ರಶ್ನಿಸಿದರು.

‘ನಗರದಲ್ಲಿ ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ಪ್ರತಿ ತಿಂಗಳ 5ರ ಒಳಗೆ ಸಂಬಳ ಹಾಕಬೇಕು. ಕಾರ್ಯಕರ್ತೆಯರಿಗೆ ಜಂಟಿ ಬ್ಯಾಂಕ್‌ ಖಾತೆ ತೆರೆಯಬಾರದು.ಮಿನಿ ಅಂಗವಾಡಿ ಕಾರ್ಯಕರ್ತೆಯರ ಗೌರವಧನ ಸಹಾಯಕರಿಗೆ ಸಮಾನವಾಗಿರುತ್ತದೆ. ಅದನ್ನು ಹೆಚ್ಚಿಸಬೇಕು ಹಾಗೂಮಿನಿ ಅಂಗವಾಡಿಗಳಿಗೆಸಹಾಯಕರನ್ನು ನೇಮಿಸಬೇಕು’ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT