ಭಾನುವಾರ, ಅಕ್ಟೋಬರ್ 20, 2019
27 °C

ಎಪಿಡಿ: 4ರಂದು ಪ್ರಶಸ್ತಿ ಪ್ರದಾನ

Published:
Updated:

ಬೆಂಗಳೂರು: ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯು ಸಂಸ್ಥೆಯ ಸಂಸ್ಥಾಪಕಿ ಎನ್.ಎಸ್. ಹೇಮಾ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ (ಅ.4) ಬೆಳಿಗ್ಗೆ 10 ಗಂಟೆಗೆ ಬಾಲಭವನದಲ್ಲಿ ಆಯೋಜಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕ್ರಿಸ್ಟಿ ಅಬ್ರಹಾಂ, ‘ಸಂಸ್ಥೆಯು 60 ವರ್ಷಗಳನ್ನು ಪೂರೈಸಿದ್ದು, ಅಂಗವಿಕಲರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ದೇಶದಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ–ಸಂಸ್ಥೆಗಳನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ₹ 1 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಕಾರ್ಯಕ್ರಮದ ದಿನದಂದೇ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುವುದು’ ಎಂದು ತಿಳಿಸಿದರು.

Post Comments (+)