ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಕಾರ್ಡ್ ಮನೆಯಲ್ಲಿದ್ದರೂ, ₹ 1.40 ಲಕ್ಷ ಡ್ರಾ!

Last Updated 21 ಮೇ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರ ಎಟಿಎಂ ಕಾರ್ಡ್ ಮನೆಯಲ್ಲೇ ಇದ್ದರೂ, ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 1.40 ಲಕ್ಷ ಡ್ರಾ ಆಗಿದೆ!

ಬನಶಂಕರಿ ಸಮೀಪದ ಭುವನೇಶ್ವರಿ ನಗರ ನಿವಾಸಿ ಇ.ಸಿ.ಲಕ್ಕಮ್ಮ ಹಣ ಕಳೆದುಕೊಂಡವರು. ಈ ಸಂಬಂಧ ಅವರ ಮಗ ಅರುಣ್ ಕುಮಾರ್ ಸೋಮವಾರ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟಿದ್ದಾರೆ. ದುಷ್ಕರ್ಮಿಗಳು ‘ಎಟಿಎಂ ಸ್ಕಿಮ್ಮಿಂಗ್’ ಮಾಡಿ, ಹಣ ದೋಚಿರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ತನಿಖೆಗೆ ಸೈಬರ್ ಕ್ರೈಂ ವಿಭಾಗದ ನೆರವು ಕೋರಿದ್ದಾರೆ.

‘ನನ್ನ ತಾಯಿ ಕೆನರಾ ಬ್ಯಾಂಕ್‌ನ ಬನಶಂಕರಿ ಕಾಮಾಕ್ಯ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ವಾರದ ಹಿಂದೆ ಅವರು ಪ್ರವಾಸ ಹೋಗಿದ್ದು, ಎಟಿಎಂ ಕಾರ್ಡ್ ಮನೆಯಲ್ಲೇ ಇತ್ತು. ಹಣದ ಅಗತ್ಯ ಇದ್ದುದರಿಂದ ಮೇ 15ರ ರಾತ್ರಿ 7.45ರ ಸುಮಾರಿಗೆ ಕೆಇಬಿ ರಸ್ತೆಯಲ್ಲಿನ ಎಟಿಎಂ ಘಟಕದಲ್ಲಿ ₹ 23,500 ಡ್ರಾ ಮಾಡಿಕೊಂಡಿದ್ದೆ. ಆ ನಂತರ ಎಲ್ಲೂ ಎಟಿಎಂ ಕಾರ್ಡ್ ಬಳಸಿಲ್ಲ’ ಎಂದು ಅರುಣ್ ದೂರಿನಲ್ಲಿ ತಿಳಿಸಿದ್ದಾರೆ.

‘ಆದರೆ, ಮೇ 17ರಂದು ₹ 20 ಸಾವಿರ ಡ್ರಾ ಆಗಿರುವುದಾಗಿ ತಾಯಿಯ ಮೊಬೈಲ್‌ಗೆ ಸಂದೇಶ ಹೋಗಿತ್ತು. ಪ್ರವಾಸದಲ್ಲಿದ್ದ ಅವರು ಕೂಡಲೇ ನನಗೆ ಕರೆ ಮಾಡಿದ್ದರು. ಬ್ಯಾಂಕ್‌ಗೆ ಹೋಗಿ ವಿಚಾರಿಸುವುದಾಗಿ ಹೇಳಿದ್ದೆ. ಆ ನಂತರ ಕೂಡ ₹ 40 ಸಾವಿರದಂತೆ ಸತತವಾಗಿ ಮೂರು ದಿನ ಹಣ ಡ್ರಾ ಆಗಿದೆ. ಹೀಗಾಗಿ, ನಮಗೆ ಮೋಸ ಮಾಡಿರುವ ವ್ಯಕ್ತಿಯನ್ನು ‍ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸಬೇಕು’ ಎಂದು ಅರುಣ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT