ನಡುರಸ್ತೆಯಲ್ಲೇ ಪ್ಯಾಂಟ್ ಬಿಚ್ತೀನಿ ಎಂದ ಆಟೊ ಚಾಲಕ

7
ಯುವತಿ ಜೊತೆ ಅಸಭ್ಯ ವರ್ತನೆ: ಫೇಸ್‌ಬುಕ್‌ನಲ್ಲಿ ಅಳಲು

ನಡುರಸ್ತೆಯಲ್ಲೇ ಪ್ಯಾಂಟ್ ಬಿಚ್ತೀನಿ ಎಂದ ಆಟೊ ಚಾಲಕ

Published:
Updated:
Deccan Herald

ಬೆಂಗಳೂರು: ಅಶೋಕನಗರದ ಗರುಡಾ ಶಾಪಿಂಗ್ ಮಾಲ್ ಬಳಿ ಆಟೊ ಚಾಲಕನೊಬ್ಬ, ಯುವತಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆ ಸಂಬಂಧ ನೊಂದ ಯುವತಿ, ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿ ಅಳಲು ತೋಡಿಕೊಂಡಿದ್ದಾರೆ.

‘ಕೆಎ 03 ಎಬಿ 7734 ನೋಂದಣಿ ಸಂಖ್ಯೆ ಆಟೊದ ಚಾಲಕ, ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಆತನನ್ನು ಬಂಧಿಸಿ, ಚಾಲನಾ ಪರವಾನಗಿ ರದ್ದುಪಡಿಸಿ’ ಎಂದು ಯುವತಿ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.

‘ನಾನು ಮತ್ತು ನನ್ನ ಸ್ನೇಹಿತರು, ಭಾನುವಾರ ಸಂಜೆ ಗರುಡಾ ಮಾಲ್‌ಗೆ ಹೋಗಿದ್ದೆವು. ಕಾಫಿ ಕುಡಿದು 5.23 ಗಂಟೆಗೆ ಮಾಲ್‌ನಿಂದ ಹೊರಬಂದು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೊರಟಿದ್ದೆವು. ಫುಟ್‌ಪಾತ್‌ ಬಳಿಯೇ ಆಟೊ ನಿಲ್ಲಿಸಿಕೊಂಡಿದ್ದ ಚಾಲಕ, ನನ್ನನ್ನು ನೋಡಿ ಗುರಾಯಿಸಿದ್ದ. ನಂತರ, ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ. ಆತನ ವರ್ತನೆಯನ್ನು ನಾನು ಪ್ರಶ್ನಿಸಿದ್ದೆ’.

‘ಅಷ್ಟಕ್ಕೆ ಅಶ್ಲೀಲ ಪದಗಳಿಂದ ನಮಗೆ ಬೈದಿದ್ದ ಆತ, 'ನನ್ನಿಷ್ಟ ನಾನು ಯಾರನ್ನಾದರೂ ಗುರಾಯಿಸುತ್ತೇನೆ. ನಡುರಸ್ತೆಯಲ್ಲೇ ಪ್ಯಾಂಟ್‌ ಬಿಚ್ಚಿ ಕುಣಿಯುತ್ತೇನೆ. ನಿನಗೇನು’ ಎಂದು ಪುನಃ ಗುರಾಯಿಸಲಾರಂಭಿಸಿದ್ದ. ಆತನ ವರ್ತನೆಯನ್ನು ವಿಡಿಯೊ ಮಾಡಿ, ಸಮೀಪದಲ್ಲೇ ಇದ್ದ ಕಾನ್‌ಸ್ಟೆಬಲ್‌ಗೆ ತೋರಿಸಿದೆ. ಅಷ್ಟರಲ್ಲೇ ಆತ ಸ್ಥಳದಿಂದ ಹೊರಟು ಹೋಗಿದ್ದ’ ಎಂದು ಯುವತಿ ಹೇಳಿದ್ದಾರೆ.

’ಪ್ರಯಾಣಿಕರಿಗಾಗಿ ಕಾಯುವ ವೇಳೆಯಲ್ಲೇ ಈ ಚಾಲಕ, ಈ ರೀತಿ ವರ್ತಿಸುತ್ತಾನೆ. ಆಕಸ್ಮಾತ್, ಯಾರಾದರೂ ಮಹಿಳೆಯರು ಆಟೊದಲ್ಲಿ ಪ್ರಯಾಣಿಸಿದರೆ ಅತ್ಯಾಚಾರ ಎಸಗಲೂ ಆತ ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ, ಆತನ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಿ’ ಎಂದು ಯುವತಿ ಆಗ್ರಹಿಸಿದ್ದಾರೆ. 

ಯುವತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ‘ನಿಮ್ಮ ದೂರನ್ನು ಅಶೋಕನಗರ ಪೊಲೀಸರಿಗೆ ಕಳುಹಿಸಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !