ಪರಿಸರ ಉಳಿವಿಗಾಗಿ ಜಾಗೃತಿ ಅಭಿಯಾನ

ಭಾನುವಾರ, ಜೂನ್ 16, 2019
28 °C

ಪರಿಸರ ಉಳಿವಿಗಾಗಿ ಜಾಗೃತಿ ಅಭಿಯಾನ

Published:
Updated:
Prajavani

ಬೆಂಗಳೂರು: ‘ಮುಂದಿನ ಪೀಳಿಗೆಗಾಗಿ ಇಂದಿನಿಂದಲೇ ಪರಿಸರ ಉಳಿಸಿ’ ಎಂಬ ಘೋಷಣೆಯೊಂದಿಗೆ ವಿವಿಧ ಪರಿಸರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಜಾಗೃತಿ ಅಭಿಯಾನ ನಡೆಸಿದರು.

‘ಮುಂದಿನ ಭವಿಷ್ಯ ಇಂದಿನಿಂದ,  ಹವಾಮಾನ ಬದಲಾಗುತ್ತಿದೆ..ನೀವೆಂದು ಬದಲಾಗುತ್ತೀರಿ?, ವ್ಯವಸ್ಥೆ ಬದಲಾಗಲಿ.. ಹವಾಮಾನವಲ್ಲ, ಜನರು ಬದಲಾಗಲಿ.. ವಾಯುಗುಣವಲ್ಲ, ಈ ಭೂಮಿ, ಗಾಳಿ, ನೀರು ನಮ್ಮದು..ಇದರ ಸಂರಕ್ಷಣೆಯ ಹೊಣೆಯೂ ನಮ್ಮದೇ’ ಎಂಬ ಘೋಷವಾಕ್ಯಗಳನ್ನು ಕೂಗಿ, ಸಂಗೀತ, ನೃತ್ಯ, ಬೀದಿ ನಾಟಕಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದರು. 

‘ನಗರದಲ್ಲಿ ದಿನೇದಿನೇ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ನಗರದ ಪರಿಸರವನ್ನು ಹಾಳು ಮಾಡುತ್ತಿವೆ. ವಿಶ್ವ ಪರಿಸರ ದಿನ ಸಮೀಪಿಸುತ್ತಿದೆ. ಒಂದು ದಿನ ಆಚರಣೆಯಲ್ಲಿ ತೊಡಗಿ, ಭಾಷಣ ಮಾಡುವುದರಿಂದ ಪರಿಸರ ಉಳಿಯುವುದಿಲ್ಲ. ಅದನ್ನು ಕರ್ತವ್ಯದಂತೆ ಪಾಲಿಸಬೇಕು. ಇನ್ನು ಮುಂದಾದರೂ ಸರ್ಕಾರಗಳು ಪರಿಸರ ಬಗ್ಗೆ ಕಾಳಜಿ ತೋರಬೇಕು’ ಎಂದು ಅಭಿಯಾನದಲ್ಲಿ ಭಾಗವಹಿಸಿದ್ದ ದಿಶಾ ಹೇಳಿದರು. 

‘ಲೋಕಸಭೆ ಚುನಾವಣೆ ವೇಳೆ ಪಕ್ಷಗಳು ಪ್ರಣಾಳಿಕೆಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಪ್ರಸ್ತಾಪಿಸಲಿಲ್ಲ. ಪರಿಸರದ ಉಳಿವಿಗಾಗಿ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಪರಿಸರ ಉಳಿಸಿ ಎಂದು ನಾವೇ ಒತ್ತಡ ಹೇರುವುದು ದುರಂತ’ ಎಂದು ಉದಯ್‌ ಕುಮಾರ್‌ ಹೇಳಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !