ಬುಧವಾರ, ಜೂನ್ 3, 2020
27 °C

ಬಿ ಪ್ಯಾಕ್‌; ನಾಯಕತ್ವ ತಯಾರಿ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ ಪ್ಯಾಕ್ (ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ) ಸಂಸ್ಥೆಯು ಉತ್ತಮ ಆಡಳಿತಕ್ಕಾಗಿ ನಾಯಕತ್ವ ಸಿದ್ಧತೆ ಕಾರ್ಯಾಗಾರದ ಏಳನೇ ಆವೃತ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

‘ಚುನಾವಣೆಗಳಲ್ಲಿ ಸ್ಪರ್ಧಿಸಿ ನಗರವನ್ನು ಪರಿವರ್ತನೆ ಮಾಡಬೇಕೆಂಬ ಅಭಿಲಾಷೆ ಹೊಂದಿರುವವರಿಗೆ ಕಾರ್ಯಾಗಾರದಲ್ಲಿ ತರಬೇತಿ ನೀಡುತ್ತೇವೆ’ ಎಂದು ಸಂಸ್ಥೆಯ ಕಾರ್ಯಸಂಯೋಜಕ ರಾಘವೇಂದ್ರ ಪೂಜಾರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಏನೆಲ್ಲಾ ಕಲಿಯಬಹುದು: ‘ನಗರ ಪಾಲಿಕೆ ಆಡಳಿತ, ವಾರ್ಡ್‌ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುವ ಪರಿ, ಸಾರ್ವಜನಿಕರು ಆಡಳಿತದಲ್ಲಿ ಭಾಗವಹಿಸುವ ವಿಧಾನ, ಸಾರ್ವಜನಿಕರ ನೀತಿಯ ವಿಶ್ಲೇಷಣೆ, ಚುನಾವಣಾ ಪ್ರಚಾರ, ರಾಜಕೀಯ ಪರಿಸ್ಥಿತಿ ಬಗ್ಗೆ ಕಲಿಯಬಹುದು’ ಎಂದರು.

ತರಬೇತಿ ಹೇಗಿರಲಿದೆ: ಆಗಸ್ಟ್‌ನಿಂದ ತರಗತಿಗಳು ಪ್ರಾರಂಭವಾಗಲಿವೆ. ಪ್ರತಿ ಶುಕ್ರವಾರ ಸಂಜೆ 6ರಿಂದ 9 ಮತ್ತು ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ತರಬೇತಿ ನೀಡಲಾಗುತ್ತದೆ.ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.bpac.in/bclip) ಜುಲೈ 31ರ ಒಳಗೆ ಅರ್ಜಿ ಸಲ್ಲಿಸಬೇಕು.

ಸಂಪರ್ಕ: 9663806688.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು