ಹಿಂದುಳಿದ ವರ್ಗಗಳ ಆಯೋಗದಿಂದ ವಿಶೇಷ ವರದಿ ಸಲ್ಲಿಕೆ

ಶನಿವಾರ, ಜೂಲೈ 20, 2019
22 °C

ಹಿಂದುಳಿದ ವರ್ಗಗಳ ಆಯೋಗದಿಂದ ವಿಶೇಷ ವರದಿ ಸಲ್ಲಿಕೆ

Published:
Updated:
Prajavani

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಬಹಿರಂಗ ವಿಚಾರಣೆಗೆ ಸಂಬಂಧಿಸಿದಂತೆ 120 ಸಲಹೆಗಳ ವರದಿಯನ್ನು ಮಂಗಳವಾರ ಹಿಂದುಳಿದ ವರ್ಗಗಳ ಇಲಾಖೆಗೆ ಸಲ್ಲಿಸಲಾಯಿತು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ  ಎಚ್. ಕಾಂತರಾಜ ಅವರು, ವಿಕಾಸಸೌಧದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಅವರಿಗೆ ವರದಿ ಸಲ್ಲಿಸಿದರು.

ಬಹಿರಂಗ ವಿಚಾರಣೆಯಲ್ಲಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗುವ ಕುರಿತು, ಪಟ್ಟಿಯಲ್ಲಿದ್ದರೂ ಜಾತಿಗಳ ಪರ್ಯಾಯ ಪದಗಳು ಸೇರದಿರುವುದು, ಮೀಸಲಾತಿ ಪಟ್ಟಿಯಲ್ಲಿ ತಪ್ಪಾಗಿ ಹೆಸರು ಮುದ್ರಿತವಾಗಿರುವುದು ಇತ್ಯಾದಿ ಕುರಿತು ಅಹವಾಲು ಸಲ್ಲಿಕೆಯಾಗಿವೆ. ಈ ಸಂಬಂಧ ಆಯೋಗವು 120 ಸಲಹೆಗಳನ್ನು ವರದಿ ರೂಪದಲ್ಲಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಕಾಂತರಾಜ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಲಿಂಗಪ್ಪ ಮತ್ತು ಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !