ಗುರುವಾರ , ಆಗಸ್ಟ್ 22, 2019
22 °C

ಮಾರಿಹಾಳ ಕೆರೆಗೆ ಬಾಗಿನ ಅರ್ಪಿಸಿದ ಲಕ್ಷ್ಮಿ

Published:
Updated:
Prajavani

ಬೆಳಗಾವಿ: ಬರೋಬ್ಬರಿ 47 ವರ್ಷಗಳ ನಂತರ ತುಂಬಿದ ತಾಲ್ಲೂಕಿನ ಮಾರಿಹಾಳ ಕೆರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಬಾಗಿನ ಅರ್ಪಿಸಿದರು.

ಬೈಕ್‌ನಲ್ಲಿ ಹಲಗಾ, ಬಸ್ತವಾಡ, ಕಮಕಾರಟ್ಟಿ, ಕೊಂಡಸಕೊಪ್ಪ, ಮಾರಿಹಾಳ ಗ್ರಾಮಗಳಿಗೆ ತೆರಳಿದ ಅವರು ‌ಮನೆ, ಬೆಳೆ, ಬಟ್ಟೆ, ಸಾಮಗ್ರಿಗಳನ್ನು ಕಳೆದುಕೊಂಡವರನ್ನು ಭೇಟಿಯಾಗಿ ಸಂತೈಸಿದರು. ಅನೇಕ ಕಡೆ ಕಾರು ಹೋಗಲಾಗದ ಸ್ಥಿತಿ ಇರುವುದರಿಂದ ಬೈಕ್‌ನಲ್ಲಿ ಸಂಚರಿಸಿದರು.

ಕ್ಷೇತ್ರದಲ್ಲಿ ಮಳೆಯಿಂದ ಆದ ನಷ್ಟದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿವರ ಸಿದ್ಧಪಡಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಯತ್ನಿಸುತ್ತಿದ್ದಾರೆ.

Post Comments (+)