ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಪತ್ತೆಗೆ ನಾಯಿ ನೇಮಕ!

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಪಟ್ನಾ: ಅಕ್ರಮ ಮದ್ಯ ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದ 20 ನಾಯಿಗಳ ಪಡೆಯನ್ನು ಕಳುಹಿಸುವಂತೆ ಬಿಹಾರ ಸರ್ಕಾರ ತೆಲಂಗಾಣಕ್ಕೆ ಮನವಿ ಮಾಡಿದೆ.

ಬಿಹಾರದಲ್ಲಿ ಕಳೆದ ಎರಡು ವರ್ಷಗಳಿಂದ ಮದ್ಯಪಾನ ನಿಷೇಧ ಕಾನೂನು ಜಾರಿಯಲ್ಲಿದ್ದು, ಈ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸುವುದರ ಭಾಗವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ತೆಲಂಗಾಣದ ಗುಪ್ತಚರ ತರಬೇತಿ ಅಕಾಡೆಮಿಯಲ್ಲಿ ನಾಯಿಗಳು 8–9 ತಿಂಗಳು ತರಬೇತಿ ಪಡೆಯಲಿವೆ. ತೀವ್ರ ಹುಡುಕಾಟದ ಬಳಿಕ, ತೆಲಂಗಾಣದಲ್ಲಿ ವಿಶೇಷ ತರಬೇತಿ ಪಡೆದ ನಾಯಿಗಳಿರುವುದು ತಿಳಿಯಿತು. ಅವು ಸ್ಫೋಟಕಗಳನ್ನು ಮಾತ್ರವಲ್ಲದೆ ಮದ್ಯವನ್ನೂ ಪತ್ತೆಮಾಡಬಲ್ಲವಾಗಿವೆ ಎಂದು ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ವಿನಯ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೊದಲು ನಾಲ್ಕು ಪೊಲೀಸ್‌ ವಲಯಗಳಲ್ಲಿ ನಾಯಿಗಳನ್ನು ನಿಯೋಜಿಸಲಾಗುವುದು. ಯೋಜನೆ ಯಶಸ್ವಿಯಾದರೆ ಮತ್ತಷ್ಟು ನಾಯಿಗಳಿಗೆ ತೆಲಂಗಾಣಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.

ಮತ್ತೊಂದು ನಿಷೇಧ: ಸಂಸ್ಕರಿಸದ ತಂಬಾಕು ಬಳಕೆಯನ್ನು ಸಹ ರಾಜ್ಯದಲ್ಲಿ ನಿಷೇಧಿಸಲು ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ಸರ್ಕಾರ ನಿರ್ಧರಿಸಿದೆ.

ನೂರಾರು ಜನರ ಅನಾರೋಗ್ಯಕ್ಕೆ ಕಾರಣವಾಗಿರುವ ತಂಬಾಕು ನಿಷೇಧದ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT