ಸೋಮವಾರ, ನವೆಂಬರ್ 18, 2019
27 °C
ಕಾರ್ಮಿಕ ಇಲಾಖೆಯಿಂದ ಕ್ರಮ

‘ಬೆಂಗಳೂರು ಸೆಕ್ಯುರಿಟಿ ಫೋರ್ಸ್‌’ ನೋಂದಣಿ ರದ್ದು

Published:
Updated:

ಬೆಂಗಳೂರು: ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಅಮಾನವೀಯವಾಗಿ ವರ್ತಿಸಿದ ಕಾರಣಕ್ಕೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ‘ಬೆಂಗಳೂರು ಸೆಕ್ಯುರಿಟಿ ಫೋರ್ಸ್‌ ಆ್ಯಂಡ್‌ ಹೌಸ್‌ ಕೀಪಿಂಗ್‌ ಸರ್ವಿಸ್’ ಕಂಪನಿಯ ನೋಂದಣಿಯನ್ನು ಕಾರ್ಮಿಕ ಇಲಾಖೆ ರದ್ದುಪಡಿಸಿದೆ.

ಸಂಸ್ಥೆಯ ಮಾಲೀಕ ಸಲೀಂ ಖಾನ್ ತನ್ನ ಕಂಪನಿಯ ಕಾರ್ಮಿಕರಾದ ಫೈಜುವುದ್ದೀನ್ ಮತ್ತು ರೈಸೆವುದ್ದೀನ್ ಎಂಬುವವರ ಮೇಲೆ ಇತ್ತೀಚೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಸಲೀಂ ಖಾನ್‌ನನ್ನು ಬಂಧಿಸಿದ್ದರು.

ಹಲ್ಲೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಕಾರ್ಮಿಕ ಸಚಿವ ಎಸ್‌. ಸುರೇಶ್‌ಕುಮಾರ್, ಕಾರ್ಮಿಕ ಅಧಿಕಾರಿ ಸಿ.ಎನ್‌. ಯಶೋಧರ ಅವರ ನೇತೃತ್ವದಲ್ಲಿ ತಂಡ ರಚಿಸಿ ಸಂತ್ರಸ್ತ ಸೆಕ್ಯುರಿಟಿ ಗಾರ್ಡ್‌ಗಳ ಹೇಳಿಕೆ ಪಡೆಯುವಂತೆ ಸೂಚಿಸಿದ್ದರು. ಅಲ್ಲದೆ, ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಇದೀಗ ಸಚಿವರ ನಿರ್ದೇಶನದಂತೆ, ಕಾರ್ಮಿಕ ಕಾಯ್ದೆಯಡಿ ನೋಂದಣಿಯಾಗಿದ್ದ ಕಂಪನಿಯ ಪರವಾನಗಿಯನ್ನು ಇಲಾಖೆ ಗುರುವಾರ ರದ್ದುಪಡಿಸಿದೆ.

ಎಂಟು ವರ್ಷಗಳ ಹಿಂದೆ ಸಲೀಂ ಖಾನ್ ಆರಂಭಿಸಿದ್ದ ಸೆಕ್ಯುರಿಟಿ ಗಾರ್ಡ್‌ ಪೂರೈಸುವ ಕಂಪನಿಯಲ್ಲಿ ಅಸ್ಸಾಂನ ಫೈಜುವುದ್ದೀನ್ ಮತ್ತು ರೈಸೆವುದ್ದೀನ್ ಕೆಲಸ ಮಾಡುತ್ತಿದ್ದರು.

ಪ್ರತಿಕ್ರಿಯಿಸಿ (+)