ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಎನ್‌ಎಸ್‌ಎಸ್‌ ನೆರವು

ಬೆಂಗಳೂರು ವಿಶ್ವವಿದ್ಯಾಲಯದಿಂದ ₹10 ಲಕ್ಷ ಮೊತ್ತದ ಸಾಮಗ್ರಿ
Last Updated 15 ಆಗಸ್ಟ್ 2019, 19:54 IST
ಅಕ್ಷರ ಗಾತ್ರ

ಕೆಂಗೇರಿ: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳ ಎನ್‌ಎಸ್‌ಎಸ್ ಘಟಕಗಳ ಸಹಭಾಗಿತ್ವದಲ್ಲಿ ₹10 ಲಕ್ಷ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಗುರುವಾರ ಕಳುಹಿಸಿಕೊಡಲಾಯಿತು.

ಬ್ಲಾಂಕೆಟ್, ಪಂಚೆ, ಸೀರೆ, ಶರ್ಟ್, ಮಕ್ಕಳ ಬಟ್ಟೆ, ಸ್ಯಾನಿಟರಿ ಪ್ಯಾಡ್, ಪಾತ್ರೆ, ಔಷಧ, ಪ್ರಥಮ ಚಿಕಿತ್ಸಾ ಪರಿಕರ ಹಾಗೂ ಇತರೆ ದಿನಬಳಕೆ ವಸ್ತುಗಳನ್ನು ಹೊತ್ತು ವಿಶ್ವವಿದ್ಯಾಲಯದ ಆವರಣದಿಂದ ನೆರೆಪೀಡಿತ ಬೆಳಗಾವಿಯ ಅಥಣಿ ತಾಲ್ಲೂಕಿಗೆ ಹೊರಟ ಎರಡು ಟ್ರಕ್‌ಗಳಿಗೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಬೀಳ್ಕೊಟ್ಟರು.

‘ಆಹಾರ ಸಾಮಗ್ರಿಗಳೊಂದಿಗೆ ಐವರು ಎನ್ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳು ಹಾಗೂ 25 ಸ್ವಯಂಸೇವಕರು ನೆರೆಪೀಡಿತ ಸ್ಥಳಗಳಿಗೆ ತೆರಳಲಿದ್ದು, ಸಂಕಷ್ಟದಲ್ಲಿರುವ ಜನತೆಯೊಂದಿಗೆ ಪುನರ್ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾಮಗ್ರಿಗಳು ದುರ್ಬಳಕೆ ಆಗದಂತೆ ಸ್ವಯಂಸೇವಕರು ಕ್ರಮವಹಿಸಲಿದ್ದಾರೆ’ ಎಂದು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಎನ್. ಸತೀಶ್ ಗೌಡ ತಿಳಿಸಿದರು.

‘ಪ್ರೊ.ವೇಣುಗೋಪಾಲ್ ವೈಯಕ್ತಿ ಕವಾಗಿ ಒಂದು ತಿಂಗಳ ಸಂಬಳವನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ದ್ದಾರೆ ಎಂದರು.

ಕುವೆಂಪು ಪ್ರಥಮದರ್ಜೆ ಕಾಲೇಜು, ಸ್ಫೂರ್ತಿ ಕಾಲೇಜು, ಬಿಡದಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಜ್ಞಾನ ವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಕೆಐಎಂಎಸ್ಆರ್ ಇನ್‌ಸ್ಟಿಟ್ಯೂಟ್, ಹಾರೋಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುಪ್ತ ಕಾಲೇಜು, ಜಿಂದಾಲ್, ಜಯನಗರ ನ್ಯಾಷನಲ್ ಕಾಲೇಜು, ನೆಲಮಂಗಲ ಸಿದ್ಧಗಂಗಾ ಕಾಲೇಜು, ಎಎಸ್‌ಸಿ ಡಿಗ್ರಿ ಕಾಲೇಜು, ಸುರಾನಾ ಕಾಲೇಜು, ಕೆಂಗೇರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ 20ಕ್ಕೂ ಹೆಚ್ಚು ಕಾಲೇಜುಗಳು ನೆರೆ ಪರಿಹಾರಕ್ಕೆ ಸಹಾಯಹಸ್ತ ನೀಡಿವೆ.

‘‍ನೆರೆ ಸಂತ್ರಸ್ತರಿಗೆ ನೆರವಾಗಲು ವಿಶ್ವವಿದ್ಯಾಲಯದ ಸಿಬ್ಬಂದಿ ಒಂದು ದಿನದ ವೇತನವನ್ನು ನೀಡಲಿದ್ದಾರೆ. ಅದರ ಮೊತ್ತ ₹50 ಲಕ್ಷ ಆಗಲಿದೆ’ ಎಂದು ಕೆ.ಆರ್‌.ವೇಣುಗೋಪಾಲ್‌ ಹೇಳಿದರು. ಕುಲಸಚಿವ ಬಿ.ಕೆ.ರವಿ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಶಿವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT