ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಲಕ್ಷ ಮತದಾರರು ಹೆಚ್ಚಿದರೂ ಮತದಾನ ಕುಸಿತ

Last Updated 23 ಏಪ್ರಿಲ್ 2019, 20:24 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆ ಮತದಾನ ಪ್ರಮಾಣಕ್ಕೆ ಸಂಬಂಧಿಸಿದಂತೆ ಬಿ–ಪ್ಯಾಕ್‌ ವಿಶ್ಲೇಷಣೆ ನಡೆಸಿದ್ದು, ಅದರ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

* ಈ ಸಲದ ಲೋಕಸಭಾ ಚುನಾವಣೆಯಲ್ಲಿನ ಮತದಾನದ ಪ್ರಮಾಣ (ಶೇ 54.2) 2014ಕ್ಕಿಂತಲೂ ಕಡಿಮೆಯಾಗಿದೆ. ಆದರೆ, ಈ ಅವಧಿಯಲ್ಲಿ ಮತದಾರರ ಸಂಖ್ಯೆ 4 ಲಕ್ಷದಷ್ಟು ಹೆಚ್ಚಾಗಿದೆ.

* ಮಹಿಳಾ ಮತದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ

* 2018 ಮತ್ತು 2019ರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವೊಂದರಲ್ಲೇ ಮತದಾರರ ಸಂಖ್ಯೆ 24,999ರಷ್ಟು ಕಡಿಮೆಯಾಗಿದೆ

* ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಮತ ಹಕ್ಕು ಚಲಾಯಿಸಿದವರ ಸಂಖ್ಯೆಗೆ ಹೋಲಿಸಿದರೆ 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಸಂಖ್ಯೆಯಲ್ಲಿ 2.50 ಲಕ್ಷದಷ್ಟು ಕಡಿಮೆಯಾಗಿದೆ

* ಬೆಂಗಳೂರು ನಗರದ ಮತದಾರರ ಸಂಖ್ಯೆ 72 ಲಕ್ಷಕ್ಕೆ ತಲುಪಿದೆ. ಹಿಂದಿನ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ

* ಬೆಂಗಳೂರು ನಗರದಲ್ಲಿ (ಉತ್ತರ, ದಕ್ಷಿಣ ಮತ್ತು ಕೇಂದ್ರ ಕ್ಷೇತ್ರಗಳು ಸೇರಿ) ನಡೆದ ಮತದಾನದ ಸರಾಸರಿ ಪ್ರಮಾಣ ಶೇ 54.17

* ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಆಗಿರುವ ಮತದಾನದ ಪ್ರಮಾಣ ಶೇ 64.90

* 2018ರ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ನಡುವಿನ ಅವಧಿಯಲ್ಲಿ ನಗರದಲ್ಲಿ ಒಟ್ಟಾರೆ 26,622 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ (ಬೆಂಗಳೂರು ದಕ್ಷಿಣ 24,999, ಕೇಂದ್ರ 1,623). ಇದೇ ಅವಧಿಯಲ್ಲಿ 4,308 ಹೊಸ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ

* 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಸರಾಸರಿ ಶೇ 4.38ರಷ್ಟು ಮತದಾನ ಕಡಿಮೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT