ಧಾರವಾಡದ ‍ಪ್ರಧಾನ ಕಚೇರಿ ಎದುರು ಮುಷ್ಕರ

7
‘ಬ್ಯಾಂಕ್ ಮಿತ್ರ’ರ ಮೇಲೆ ಕೆವಿಜಿಬಿ ದಬ್ಬಾಳಿಕೆ ಆರೋಪ

ಧಾರವಾಡದ ‍ಪ್ರಧಾನ ಕಚೇರಿ ಎದುರು ಮುಷ್ಕರ

Published:
Updated:

ಹುಬ್ಬಳ್ಳಿ: ‘ಬ್ಯಾಂಕ್ ಮಿತ್ರ’ರ ಮೇಲೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಧಾರವಾಡದಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಎದುರು ಇದೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಬ್ಯಾಂಕ್ ಮಿತ್ರಾಸ್ ಸಂಘದ ಪ್ರಧಾನ ಕಾರ್ಯದರ್ಶಿ ದೇವು ಸೂರಗುಪ್ಪೆ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್ ಶಾಖೆಗಳಿಲ್ಲದ ಹಳ್ಳಿಗಳಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆ ನೀಡಲು ಎಲ್ಲ ಬ್ಯಾಂಕ್‌ಗಳು ‘ಬ್ಯಾಂಕ್ ಮಿತ್ರ’ರನ್ನು ನೇಮಿಸಿಕೊಂಡಿವೆ. ₹5 ಸಾವಿರ ಸಂಬಳ ನೀಡಬೇಕು ಎಂಬ ನಿಯಮ ಇದ್ದರೂ, ಎಲ್ಲ ಬ್ಯಾಂಕ್‌ಗಳು ಅಷ್ಟು ನೀಡುತ್ತಿಲ್ಲ. ಬೇರೆ ಯಾವುದೇ ಸೌಲಭ್ಯವೂ ಸಿಗುತ್ತಿಲ್ಲ. ಸದಸ್ಯರ ಹಿತ ಕಾಪಾಡಲು ಸಂಘ ರಚಿಸಿಕೊಂಡ ನಂತರ ಕೆವಿಜಿ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಪ್ರಕಾಶ್ ಹೊಸಮನಿ, ಗದಗ ಜಿಲ್ಲಾಧ್ಯಕ್ಷ ಬಸವರೆಡ್ಡಿ ಗುಲಗುಂಜಿಕೊಪ್ಪ ಎಂಬುವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ’ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳ ಸಂಘದ ಪದಾಧಿಕಾರಿಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಉದ್ದಾರಗೌಡ ಯರಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !