ಬ್ಯಾಂಕ್‌ಗೆ ನುಗ್ಗಿ ಕಳ್ಳತನಕ್ಕೆ ಯತ್ನ

7

ಬ್ಯಾಂಕ್‌ಗೆ ನುಗ್ಗಿ ಕಳ್ಳತನಕ್ಕೆ ಯತ್ನ

Published:
Updated:

ಬೆಂಗಳೂರು: ನಸುಕಿನ ವೇಳೆ ಕಿಟಕಿ ಸರಳು ಮುರಿದು ‘ಜನ ಸ್ಮಾಲ್ ಫೈನಾನ್ಸ್‌’ ಬ್ಯಾಂಕ್‌ಗೆ ನುಗ್ಗಿದ ದುಷ್ಕರ್ಮಿ ಹಣವಿದ್ದ ಲಾಕರ್‌ ಒಡೆಯಲು ಯತ್ನಿಸಿ ವಿಫಲನಾಗಿ ಬರಿಗೈಲಿ ಹೊರಟು ಹೋಗಿದ್ದಾನೆ.

ಕೆಂಗೇರಿ ಉಪನಗರದ 80 ಅಡಿ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ಬೆಳಿಗ್ಗೆ ಈ ಪ್ರಕರಣ ನಡೆದಿದ್ದು, ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕ ಎ.ಆರ್.ವಿನೋದ್ ಅವರು ಕೆಂಗೇರಿ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಸೋಮವಾರ ಬೆಳಿಗ್ಗೆ 8ರ ಸುಮಾರಿಗೆ ಕೆಲಸಕ್ಕೆ ಬಂದಾಗ, ಷಟರ್‌ನ ಬೀಗ ಮುರಿದಿತ್ತು. ಅದನ್ನು ನೋಡಿ ಗಾಬರಿಯಾಯಿತು. ಒಳಗೆ ಹೋಗಿ ನೋಡಿದರೆ, ಕಿಟಕಿ ಸರಳು ಕತ್ತರಿಸಲಾಗಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !