ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ನಿಲ್ದಾಣದಲ್ಲಿ ರಾಜಕಾರಣಿಗಳ ಚಿತ್ರ !

Last Updated 31 ಮಾರ್ಚ್ 2018, 9:02 IST
ಅಕ್ಷರ ಗಾತ್ರ

ಮುಂಡಗೋಡ: ಮಾದರಿ ನೀತಿ ಸಂಹಿತೆ ಜಾರಿಯಾಗಿ 72 ಗಂಟೆಗಳು ಕಳೆದರೂ, ತಾಲ್ಲೂಕಿನ ಕೆಲವೆಡೆ ರಾಜಕೀಯ ಮುಖಂಡರ ಭಾವಚಿತ್ರಗಳು ಸಾರ್ವಜನಿಕ ಸ್ಥಳದಲ್ಲಿ ರಾರಾಜಿಸುತ್ತಿವೆ.

ಸಾಲಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಗಿನಕೊಪ್ಪದ ರುಡ್‌ಸೆಟಿ ಎದುರಿಗಿರುವ ಮಿನಿಬಸ್‌ ನಿಲ್ದಾಣದಲ್ಲಿ ಈ ಹಿಂದೆ ಅಳವಡಿಸಿರುವ ರಾಜಕೀಯ ಮುಖಂಡರ ಭಾವಚಿತ್ರಗಳು ರಾರಾಜಿಸುತ್ತಿವೆ. ಶುಕ್ರವಾರ ಸಂಜೆವರೆಗೂ ಇವುಗಳನ್ನು ತೆರವುಗೊಳಿಸುವುದಾಗಲಿ, ಭಾವಚಿತ್ರಗಳನ್ನು ಮುಚ್ಚುವುದಾಗಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳು ಮಾಡಲಿಲ್ಲ ಎಂದು ಸ್ಥಳೀಯರು ದೂರಿದರು.

ತಾಲ್ಲೂಕಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ರಾಜಕೀಯ ಮುಖಂಡರ ಬ್ಯಾನರ್‌ಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯಾದರೂ ಫ್ಲೆಕ್ಸ್‌, ಬ್ಯಾನರ್‌ಗಳು ಉಳಿದಿದ್ದರೆ, ಮಾಹಿತಿ ದೊರೆತ ಕೂಡಲೇ ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್‌ ಬಿ.ಎಸ್‌.ಖಡಕಬಾವಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT