ಶಾಶ್ವತ ಪರಿಹಾರ ಕಲ್ಪಿಸಿ:ಮೇಯರ್‌

ಸೋಮವಾರ, ಮೇ 27, 2019
27 °C

ಶಾಶ್ವತ ಪರಿಹಾರ ಕಲ್ಪಿಸಿ:ಮೇಯರ್‌

Published:
Updated:
Prajavani

ಬೆಂಗಳೂರು: ನಗರದಲ್ಲಿ ಮಳೆ ಬಂದಾಗ ಹೆಚ್ಚು ಅನಾಹುತ ಸಂಭವಿಸುವ ಸೂಕ್ಷ್ಮ ಪ್ರದೇಶಗಳಿಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರತಿ ಮಳೆಯ ಸಂದರ್ಭದಲ್ಲಿಯೂ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಬೇಲಿ ಮಠದ ಹತ್ತಿರದ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ದೊಡ್ಡ ಎರಡು ಪೈಪ್‌ಗಳನ್ನು ಅಳವಡಿಸುವ ಮೂಲಕ ಮಳೆ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿಸಬೇಕು. ಆಗ ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ. ಯೋಜನಾ ವರದಿ ತಯಾರಿಸಿ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಅವರು ನಾಯಂಡಹಳ್ಳಿ ಜಂಕ್ಷನ್‌ನ ಬಳಿ ಇರುವ ಸೇತುವೆಗೆ ಭೇಟಿ ನೀಡಿದರು.

ಅಲ್ಲಿಯೂ ರಸ್ತೆ ಮೇಲೆ ನೀರು ಹರಿದು ತೊಂದರೆಯಾಗುತ್ತಿರುವ ಕುರಿತು ಪರಿಶೀಲಿಸಿದರು. ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸುವ ಮೂಲಕ ನೀರು ರಸ್ತೆ ಮೇಲೆ ಹರಿಯುವುದನ್ನು ತಡೆಗಟ್ಟಬೇಕು ಎಂದು ಪಾಲಿಕೆ ಎಂಜಿನಿಯರ್‌ಗಳಿಗೆ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !