ಸೋಮವಾರ, ಆಗಸ್ಟ್ 26, 2019
28 °C
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್

ಪಾದಚಾರಿ ಮಾರ್ಗಗಳು ಹಾಳಾಗಿದ್ದರೆ ಮಾತ್ರ ದುರಸ್ತಿ

Published:
Updated:

ಬೆಂಗಳೂರು: ಸುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ವೆಚ್ಚ ಮಾಡಿದರೆ ಸಂಬಂಧಪಟ್ಟ ಎಂಜಿನಿಯರ್‌ಗಳನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

‘ಪಾದಚಾರಿ ಮಾರ್ಗಗಳನ್ನು ಖುದ್ದು ಪರಿಶೀಲನೆ ನಡೆಸಿ ಹಾಳಾಗಿದ್ದರೆ ಮಾತ್ರ ದುರಸ್ತಿಪಡಿಸಬೇಕು. ಸಂಪೂರ್ಣ ಹಾಳಾಗಿದ್ದರೆ ಮುಖ್ಯ ಎಂಜಿನಿ ಯರ್ ಅವರಿಂದ ದೃಢೀಕರಣ ಪಡೆದು ಅಭಿವೃದ್ಧಿಪಡಿಸಬೇಕು. ಅನಾವಶ್ಯಕವಾಗಿ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿದ್ದು ಕಂಡು ಬಂದರೆ ಕರ್ತವ್ಯ ಲೋಪ ಎಂದು ಪರಿಗಣಿಸಿ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪಾದಚಾರಿ ಮಾರ್ಗ ಹುಡುಕಿಕೊಡಿ..

Post Comments (+)