ಬಿಬಿಎಂಪಿ ವಾರ್ಡ್‌ ಉಪಚುನಾವಣೆ: ಬಹಿರಂಗ ಪ್ರಚಾರ ಇಂದು ಅಂತ್ಯ

ಮಂಗಳವಾರ, ಜೂನ್ 18, 2019
29 °C
29ಕ್ಕೆ ಮತದಾನ * 31ರಂದು ಎಣಿಕೆ

ಬಿಬಿಎಂಪಿ ವಾರ್ಡ್‌ ಉಪಚುನಾವಣೆ: ಬಹಿರಂಗ ಪ್ರಚಾರ ಇಂದು ಅಂತ್ಯ

Published:
Updated:

ಬೆಂಗಳೂರು: ಕಾವೇರಿಪುರ ಹಾಗೂ ಸಗಾಯಪುರ ವಾರ್ಡ್‌ಗಳ ಉಪಚುನಾವಣೆಯ ಮತದಾನ ಇದೇ 29ರಂದು (ಬುಧವಾರ) ನಡೆಯಲಿದ್ದು ಬಹಿರಂಗ ಪ್ರಚಾರ ಸೋಮವಾರ ಅಂತ್ಯವಾಗಲಿದೆ.

‘ಸೋಮವಾರ ಬೆಳಿಗ್ಗೆ 7 ಗಂಟೆಯ ಬಳಿಕ ಅಭ್ಯರ್ಥಿಗಳು ಬಹಿರಂಗ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಆದರೆ, ಮನೆ ಮನೆಗೆ ತೆರಳಿ ಮತ ಯಾಚಿಸಬಹುದು’ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದರು.

ಉಪಚುನಾವಣೆಯಲ್ಲಿ ಸಂಜೆ 5 ಗಂಟೆವರೆಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ವಿವಿಪ್ಯಾಟ್‌ ಬಳಕೆ ಇಲ್ಲ: ಪಾಲಿಕೆ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗೆ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತದೆ. ಆದರೆ, ವಿ.ವಿ.ಪ್ಯಾಟ್‌ ಬಳಕೆ ಇರುವುದಿಲ್ಲ. ಕೇವಲ ಮತಯಂತ್ರದ ಮತಪತ್ರ ಘಟಕ ಹಾಗೂ ನಿಯಂತ್ರಕ ಘಟಕಗಳನ್ನು (ಕಂಟ್ರೋಲ್‌ ಯುನಿಟ್‌) ಮಾತ್ರ ಬಳಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

31ಕ್ಕೆ ಫಲಿತಾಂಶ: ಮತ ಎಣಿಕೆ ಮೇ 31ರಂದು ನಡೆಯಲಿದೆ. ಕಾವೇರಿಪುರ ವಾರ್ಡ್‌ನ ಮತ ಎಣಿಕೆ ಬಿನ್ನಿ ಲೇಔಟ್‌ನ ನಾಗರಬಾವಿ ಮುಖ್ಯ ರಸ್ತೆ ಬಳಿಯ ಸರ್ವೋದಯ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆಯಲಿದೆ. ಸಗಾಯಪುರ ವಾರ್ಡ್‌ನ ಮತ ಎಣಿಕೆ ಬಿಬಿಎಂಪಿ ಹುಡುಗಿಯರ ಕಾಲೇಜು ಮತ್ತು ಶಾಲೆಯಲ್ಲಿ ನಡೆಯಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !