ಬಿಬಿಎಂಪಿ ಕಚೇರಿಗೆ ನುಗ್ಗಿ ಗುತ್ತಿಗೆದಾರನ ಗಲಾಟೆ

7

ಬಿಬಿಎಂಪಿ ಕಚೇರಿಗೆ ನುಗ್ಗಿ ಗುತ್ತಿಗೆದಾರನ ಗಲಾಟೆ

Published:
Updated:

ಬೆಂಗಳೂರು: ಪಾನಮತ್ತನಾಗಿದ್ದ ಗುತ್ತಿಗೆದಾರ ಪ್ರಶಾಂತ್ ಎಂಬಾತ, ರಾಜರಾಜೇಶ್ವರಿ ನಗರದ ಜಂಟಿ ಆಯುಕ್ತರ ಕಚೇರಿಗೆ ಗುರುವಾರ ಮಧ್ಯಾಹ್ನ ನುಗ್ಗಿ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾನೆ. ಪೀಠೋಪಕರಣ ಮುರಿದಿದ್ದಾನೆ.

ಆ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಜರಾಜೇಶ್ವರಿನಗರ ಪೊಲೀಸರು, ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಜಂಟಿ ಆಯುಕ್ತರ ಕಚೇರಿ ಹಾಗೂ ಎಸಿಎಫ್‌ ಕಚೇರಿಯ ನವೀಕರಣ ಕೆಲಸ ಗುತ್ತಿಗೆ ಪಡೆದಿದ್ದ ಪ್ರಶಾಂತ್‌, ವರ್ಷದ ಹಿಂದೆಯೇ ಆ ಕೆಲಸ ಮಾಡಿ ಮುಗಿಸಿದ್ದ. ಅಷ್ಟಾದರೂ ₹3 ಲಕ್ಷ ಬಿಲ್ ಬಾಕಿ ಇತ್ತು. ಅದನ್ನು ಕೇಳುವುದಕ್ಕಾಗಿ ಪಾನಮತ್ತನಾಗಿಯೇ ಕಚೇರಿಗೆ ನುಗ್ಗಿದ್ದ ಆತ, ಕಿರುಚಾಡಲಾರಂಭಿಸಿದ್ದ. ಗಾಜುಗಳನ್ನು ಒಡೆದು ಕೈಗೆ ಗಾಯ ಮಾಡಿಕೊಂಡಿದ್ದ. ಆತನನ್ನು ಹಿಡಿದುಕೊಂಡ ಕಚೇರಿ ಸಿಬ್ಬಂದಿ, ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ, ಆತನನ್ನು ಠಾಣೆಗೆ ಕರೆತಂದರು’ ಎಂದು ಪೊಲೀಸರು ತಿಳಿಸಿದರು.

'ಇತ್ತೀಚೆಗಷ್ಟೇ, ತ್ಯಾಜ್ಯ ನಿರ್ವಹಣೆಯ ಬಿಲ್ ಪಾವತಿಗೆ ಅನುಮೋದನೆ ನೀಡಲಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ವಿ.ವೆಂಕಟೇಶ್ ಎಂಬಾತ ಜಂಟಿ ಆಯುಕ್ತರಿಗೆ ಧಮ್ಕಿ ಹಾಕಿದ್ದರು. ಈಗ ಅವರ ಕಚೇರಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ’ ಎಂದರು.

ಸುದ್ದಿಗಾರರ ಜೊತೆ ಮಾತನಾಡಿದ ಜಂಟಿ ಆಯುಕ್ತ ಬಾಲಶೇಖರ್, ‘ಯಾವ ನವೀಕರಣ ಕೆಲಸ ಎಂಬ ಮಾಹಿತಿ ಇಲ್ಲ. ತಿಳಿದುಕೊಂಡು ಪ್ರತಿಕ್ರಿಯಿಸುವೆ’ ಎಂದರು.   

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !