ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ–ವಿರೋಧ ಟ್ವೀಟ್‌

ಬಿಬಿಎಂಪಿ ‘ಮುನ್ನೋಟ 2050’
Last Updated 12 ಸೆಪ್ಟೆಂಬರ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಸಲುವಾಗಿ ‘ಮುನ್ನೋಟ 2050’ರ ಕರಡು ರೂಪಿಸುವ ಚಿಂತನೆಯನ್ನು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಗುರುವಾರ ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

‘ಈ ಸಲುವಾಗಿ ಬಿಬಿಎಂಪಿಯಲ್ಲಿ ಪ್ರತ್ಯೇಕ ನಗರ ಯೋಜನಾ ಘಟಕವನ್ನು ರಚಿಸಲಿದ್ದೇವೆ. ಇದರಲ್ಲಿ ನಗರ ಯೋಜನಾ ವಿಭಾಗದ ಅಧಿಕಾರಿಗಳೂ ಇರುತ್ತಾರೆ. ಈ ಕುರಿತ ಕರಡು ರಚಿಸಲು ತಜ್ಞರನ್ನು ಸಮಿತಿಯನ್ನು ಶೀಘ್ರವೇ ರಚಿಸಲಾಗುತ್ತದೆ’ ಎಂದು ಅವರು
ತಿಳಿಸಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ತಾರಾ, ‘ಈ ಕಾರ್ಯವನ್ನು ಸಾಂವಿಧಾನಿಕ ಸಮಿತಿಯಾಗಿರುವ ಮಹಾನಗರ ಯೋಜನಾ ಸಮಿತಿ (ಎಂಪಿಸಿ) ನಡೆಸಬೇಕು. ಬಿಬಿಎಂಪಿಯ ನಗರ ಯೋಜನಾ ಘಟಕವು ಇದಕ್ಕಿಂತ ಹೇಗೆ ಭಿನ್ನವಾಗಿರಬಲ್ಲುದು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಪದೇ ಪದೇ ಹೇಳಿದ್ದನ್ನೇ ಹೇಳುವ ಬದಲು ಮೊದಲ ಹೆಜ್ಜೆಯಾಗಿ ಎಂ.ಬಿ.ಪಾಟೀಲ ಸಮಿತಿಯ ಶಿಫಾರಸು ಜಾರಿಗೆ ತನ್ನಿ. ನಂತರ ಮುಂದಿನದನ್ನು ನೋಡೋಣ’ ಎಂದು ‘ಪ್ರಜಾರಾಗ್’ ಸಂಘಟನೆಯ ಮುರಳೀಧರ ರಾವ್‌ ಸಲಹೆ ಅವರು
ನೀಡಿದ್ದಾರೆ.

‘ಭವಿಷ್ಯದ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸುತ್ತಿರುವುದನ್ನು ಸ್ವಾಗತಿಸುತ್ತೇವೆ. ಪಾಲಿಕೆಯು ಪ್ರತ್ಯೇಕ ಯೋಜನಾ ವಿಭಾಗವನ್ನು ಹೊಂದುವ ಅವಶ್ಯಕತೆ ಇದೆ. ಆದರೆ, ಈ ಯೋಜನೆ ರೂಪಿಸುವ ಪ್ರಕ್ರಿಯೆ ವಾರ್ಡ್‌ ಸಮಿತಿ, ಎಂಪಿಸಿಗಳ ಮೂಲಕ ಕೆಳಗಿನಿಂದ ಮೇಲಕ್ಕೆ ಹಂತ ಹಂತವಾಗಿ ನಡೆಯಬೇಕು’ ಎಂದು ವಿನಯ ಶ್ರೀನಿವಾಸ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT