‘ಮಹಾತ್ಮಗಾಂಧಿ–150’ ಚಿತ್ರೋತ್ಸವ 9ರಿಂದ

ಶನಿವಾರ, ಏಪ್ರಿಲ್ 20, 2019
29 °C

‘ಮಹಾತ್ಮಗಾಂಧಿ–150’ ಚಿತ್ರೋತ್ಸವ 9ರಿಂದ

Published:
Updated:
Prajavani

ಬೆಂಗಳೂರು: ‘ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾಭವನವು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಂಯೋಗದೊಂದಿಗೆ ಇದೇ 9ರಿಂದ 11ರವರೆಗೆ ‘ಮಹಾತ್ಮಗಾಂಧಿ–150’ ಚಲನಚಿತ್ರೋತ್ಸವವನ್ನು ಆಯೋಜಿಸಿದೆ’ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘‌ಮಹಾತ್ಮ ಗಾಂಧೀಜಿಯ ಬದುಕು ಹಾಗೂ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಬೇರೆ ಬೇರೆ ಭಾಷೆಗಳ ಏಳು ಚಿತ್ರಗಳು ಭಾರತೀಯ ವಿದ್ಯಾಭವನದಲ್ಲಿ ಪ್ರದರ್ಶಗೊಳ್ಳಲಿವೆ’ ಎಂದು ತಿಳಿಸಿದರು.

‘ಮೊದಲ ದಿನ ಬೆಳಿಗ್ಗೆ 11ಗಂಟೆಗೆ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ‘ಗಾಂಧಿ’ ಚಿತ್ರದ ಪ್ರದರ್ಶನವಿದೆ. ಇದೇ 10ರಂದು ಬೆಳಿಗ್ಗೆ 10.30ಕ್ಕೆ ಫಿರೋಜ್‌ ಅಬ್ಬಾಸ್‌ ಖಾನ್‌ ನಿರ್ದೇಶನದ ‘ಗಾಂಧಿ ಮೈ ಫಾದರ್‌’, ಮಧ್ಯಾಹ್ನ 2ಗಂಟೆಗೆ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’, ಸಂಜೆ ‘ಟ್ವೆಂಟಿಯತ್‌ ಸೆಂಚುರಿ ಪ್ರಾಫೆಟ್‌’ ಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದರು.

‘ಚಿತ್ರೋತ್ಸವದ ಕೊನೆಯ ದಿನ ಬೆಳಿಗ್ಗೆ ಹಿಂದಿ ಭಾಷೆಯ ‘ಮೇಕಿಂಗ್‌ ಆಫ್‌ ಮಹಾತ್ಮ’, ಮಧ್ಯಾಹ್ನ 2ಗಂಟೆಗೆ ‘ಗಾಂಧಿ ದೇವಿ’ ಹಾಗೂ ಸಂಜೆ 4.30ಕ್ಕೆ ತಮಿಳು ಭಾಷೆಯ ‘ವೆಲ್‌ಕಂ ಬ್ಯಾಕ್‌ ಗಾಂಧಿ’ ಚಿತ್ರಗಳ ಪ್ರದರ್ಶನ ಇರಲಿದೆ’ ಎಂದು ಅವರು ತಿಳಿಸಿದರು.

‘ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್‌ ಅವರು ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವ್‌ ಸಿಂಗ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರೋತ್ಸವಕ್ಕೆ ಪ್ರವೇಶ ಉಚಿತ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !