ಗುರುವಾರ , ಆಗಸ್ಟ್ 22, 2019
27 °C

ಕಸ್ತೂರಿ ರಂಗನ್‌ಗೆ ಭಾಸ್ಕರ್‌ ಪ್ರಶಸ್ತಿ

Published:
Updated:

ವಿಜಯಪುರ: ಸಿಂದಗಿಯ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ‘ಭಾಸ್ಕರ್‌ ಪ್ರಶಸ್ತಿ’ಗೆ ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ.

‘ಸಿಂದಗಿ ಪಟ್ಟಣದಲ್ಲಿ ಇದೇ 25ರಂದು ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ₹ 1 ಲಕ್ಷ ನಗದು, ಬೆಳ್ಳಿಯ ಫಲಕ ಒಳಗೊಂಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿಂದಗಿ ಸಾರಂಗಮಠ, ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶಯದಂತೆ ನಾಲ್ಕು ವರ್ಷಗಳಿಂದ ಹೆಸರಾಂತ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡುತ್ತಿದೆ ಎಂದರು.

Post Comments (+)