ಹುಬ್ಬಳ್ಳಿಯಲ್ಲಿ ಸೈಕಲ್ ಸೇವೆ: ಮುರಳಿಕೃಷ್ಣ

ಶನಿವಾರ, ಮೇ 25, 2019
27 °C
ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಟ್ರ್ಯಾಕ್ ನಿರ್ಮಾಣಗೊಂಡ ನಂತರ ಜಾರಿ

ಹುಬ್ಬಳ್ಳಿಯಲ್ಲಿ ಸೈಕಲ್ ಸೇವೆ: ಮುರಳಿಕೃಷ್ಣ

Published:
Updated:
Prajavani

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸೈಕಲ್ ಟ್ರ್ಯಾಕ್‌ ನಿರ್ಮಾಣವಾಗಲಿದ್ದು, ಆ ನಂತರ ಹುಬ್ಬಳ್ಳಿಯಲ್ಲಿ ಸೈಕಲ್ ಸೇವೆ ಆರಂಭಿಸಲಾಗುವುದು ಎಂದು ನಗರ ಭೂ ಸಾರಿಗೆ ನಿರ್ದೇಶನಲಾನಯದ ವಿಶೇಷ ಅಧಿಕಾರಿ ಎನ್‌. ಮುರಳಿಕೃಷ್ಣ ಹೇಳಿದರು.

ಸುಸ್ಥಿರ ನಗರ ಸಾರಿಗೆ ಕುರಿತು ನಗರದಲ್ಲಿ ಶನಿವಾರ ನಡೆದ ಜ್ಞಾನ ವಿನಿಮಯ ಕಾರ್ಯಾಗಾರದಲ್ಲಿ ಮೋಟಾರು ವಾಹನೇತರ ಸಾರಿಗೆ ವಿಷಯ ಕುರಿತು ಮಾತನಾಡಿದರು. ‘ಮೈಸೂರಿನಲ್ಲಿ ಈಗಾಗಲೇ ‘ಟ್ರಿಣ್ ಟ್ರಿಣ್’ ಸೈಕಲ್ ಸೇವೆ ಆರಂಭಿಸಲಾಗಿದ್ದು, ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ಮಾದರಿಯನ್ನು ಈಗ ಬೆಂಗಳೂರಿನಲ್ಲಿಯೂ ಜಾರಿ ಮಾಡಲಾಗುತ್ತಿದೆ. ಹುಬ್ಬಳ್ಳಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿಯೂ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಆ ನಂತರ ಇಲ್ಲಿಯೂ ಈ ಸೇವೆ ಆರಂಭಿಸಲಾಗುವುದು. ಇದರಿಂದ ನಗರ ಸಾರಿಗೆ ವ್ಯವಸ್ಥೆ ಸುಧಾರಣೆಯಾಗಲಿದೆ’ ಎಂದರು.

‘ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿಯೂ ಕಡಿಮೆ ದೂರಕ್ಕೆ ಸೈಕಲ್ ಟ್ರ್ಯಾಕ್ ನಿರ್ಮಿಸಲು ಅವಕಾಶ ಇದೆ. ಈ ಸಾಧ್ಯತೆ ಬಗ್ಗೆಯೂ ಪರಿಶೀಲನೆ ಮಾಡಬಹುದು. ಬೆಂಗಳೂರು, ಮೈಸೂರಿನ ನಂತರ ಎರಡನೇ ಹಂತದ ನಗರಗಳಲ್ಲಿಯೂ ಸೈಕಲ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಅಭಿಪ್ರಾಯ ಕೇಳಲಾಗಿದೆ. ವಿಜಯಪುರ ಸೇರಿ 3 ಜಿಲ್ಲೆಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿವೆ. ಒಪ್ಪಿಗೆ ಸೂಚಿಸುವ ಜಿಲ್ಲೆಗಳಲ್ಲಿ ಇದು ಜಾರಿಯಾಗಲಿದೆ. ಮೊದಲು 5 ಕಿ.ಮೀ ದೂರದ ಟ್ರ್ಯಾಕ್ ನಿರ್ಮಾಣ ಮಾಡಿ, ಪ್ರತಿಕ್ರಿಯೆ ನೋಡಿಕೊಂಡು ಅದನ್ನು ವಿಸ್ತರಿಸಲಾಗುವುದು’ ಎಂದರು.

‘ಜಿಲ್ಲೆಗಳಲ್ಲಿ ಜಾರಿಗೊಳ್ಳುವ ಸೈಕಲ್ ಸೇವೆ ಯೋಜನೆಗೆ ಸರ್ಕಾರ ₹25 ಕೋಟಿ ಈಗಾಗಲೇ ನೀಡಿದ್ದು, ಇನ್ನೂ ₹25 ಕೋಟಿಯನ್ನು ನೀಡಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !