ಹೃದ್ರೋಗ ತಡೆಗೆ ಜೀವನ ಶೈಲಿ ಬದಲಿಸಿ: ಡಾ.ಬಿಮಲ್‌

7

ಹೃದ್ರೋಗ ತಡೆಗೆ ಜೀವನ ಶೈಲಿ ಬದಲಿಸಿ: ಡಾ.ಬಿಮಲ್‌

Published:
Updated:
Prajavani

ಬೆಂಗಳೂರು: ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಹೃದ್ರೋಗಿಗಳು ದುಬಾರಿ ಮತ್ತು ಅತ್ಯಂತ ಕ್ಲಿಷ್ಟಕರ ಬೈಪಾಸ್‌ ಸರ್ಜರಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್‌) ಪ್ರಾಧ್ಯಾಪಕ ಡಾ.ಬಿಮಲ್‌ ಛಜ್ಜೇರ್ ತಿಳಿಸಿದರು.

ಬಿಮಲ್‌ ಅವರ ಜೀವಮಾನದ ಸಾಧನೆಗಾಗಿ ಲಯನ್ಸ್‌ ಡಿಸ್ಟ್ರಿಕ್‌ 317 ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಬಿಮಲ್ ಈವರೆಗೆ ಸುಮಾರು 70 ಪುಸ್ತಕಗಳನ್ನು ಬರೆದಿದ್ದು, ಆ ಪೈಕಿ ಹೃದ್ರೋಗ ಹಿಮ್ಮೆಟ್ಟಿಸುವ ಕುರಿತ ಪುಸ್ತಕ 10 ಭಾಷೆಗಳಲ್ಲಿ ಪ್ರಕಟಗೊಂಡಿದೆ. 25 ವರ್ಷಗಳಲ್ಲಿ ವಿಶ್ವದಾದ್ಯಂತ 5000ಕ್ಕೂ ಹೆಚ್ಚು ಭಾಷಣಗಳನ್ನು ನೀಡಿದ್ದಾರೆ. ಉತ್ತಮ ಜೀವನ ಶೈಲಿಯಿಂದ ಸಾವಿರಾರು ಮಂದಿ ಬೈಪಾಸ್‌ ಸರ್ಜರಿ ಮತ್ತು ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗುವುದನ್ನು ಇವರು ತಪ್ಪಿಸಿದ್ದಾರೆ ಎಂದು ಲಯನ್ಸ್‌ನ ಪ್ರಾದೇಶಿಕ ಅಧಿಕಾರಿ ಜಿ.ವೆಂಕಟೇಶ್‌ ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮಾತನಾಡಿ, ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ನೈತಿಕತೆ ಮತ್ತು ಆದರ್ಶಗಳಿಂದ ಮುಂದಿನ ತಲೆಮಾರನ್ನು ಸಶಕ್ತಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಲಯನ್ಸ್‌ ಸಂಸ್ಥೆಯ ಸತ್ಯನಾರಾಯಣ ರಾಜು, ಗಿರಿಧರ್‌ ಮತ್ತು ಡಾ. ಸಿಂಹ ಶಾಸ್ತ್ರಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !