ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಿಜೆಪಿ' ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೊ: ಮುಖಂಡರಿಗೆ ಮುಜುಗರ

Last Updated 20 ನವೆಂಬರ್ 2018, 20:27 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಹಲವಾರು ಪ್ರಮುಖರ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿರುವ 'ಬಿಜೆಪಿ' ಎಂಬ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೊಗಳು ಸೋಮವಾರ ಸಂಜೆ ಹರಿದಾಡಿದ್ದು, ಪಕ್ಷದ ಮುಖಂಡರನ್ನು ಮುಜುಗರಕ್ಕೀಡು ಮಾಡಿದೆ.

ಶಾಸಕರಾದ ಭಟ್ಕಳದ ಸುನೀಲ ನಾಯ್ಕ, ಕುಮಟಾದ ದಿನಕರ ಶೆಟ್ಟಿ, ಕಾರವಾರದ ರೂಪಾಲಿ ನಾಯ್ಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಮುಖಂಡರಾದ ಎಂ.ಜಿ.ನಾಯ್ಕ ಹಾಗೂ ಜಿಲ್ಲಾ ಪಂಚಾಯ್ತಿಯ ವಿವಿಧ ಸದಸ್ಯರ ಮೊಬೈಲ್ ಸಂಖ್ಯೆಗಳು ಈ ಗ್ರೂಪ್ ನಲ್ಲಿವೆ. ಜಟ್ಟು ಎಂಬ ವ್ಯಕ್ತಿ ಸೋಮವಾರ ಸಂಜೆ 5.30ರ ಸುಮಾರಿಗೆ ಎರಡು ವಿಡಿಯೊಗಳನ್ನು ಫಾರ್ವರ್ಡ್ ಮಾಡಿದ್ದಾರೆ.

ಗ್ರೂಪ್ ನ ಪರಿಚಯದಲ್ಲಿ, 'ಅಪ್ರತಿಮ ಹಿಂದೂ ವಾದಿ, ಗೋರಕ್ಷಕ, ಸದಾ ಜನಹಿತಕ್ಕಾಗಿ ತುಡಿಯುವ ಮನಸ್ಸಿನ ಸೂರಜ ನಾಯ್ಕ ಸೋನಿಯ ಅಭಿಮಾನಿಗಳ ಬಳಗ' ಎಂದು ಬರೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, 'ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೊ ಹಾಕಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ಆ ಗ್ರೂಪ್‌ ರಚಿಸಿದವರು ಯಾರು ಎಂಬ ಮಾಹಿತಿಯಿಲ್ಲ. ನನಗೆ ಗ್ರೂಪ್ ಅಡ್ಮಿನ್ ಯಾರೆಂದು ತಿಳಿದಿಲ್ಲ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT