ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೈಲು– ಬಸ್‌ಗೆ ಒಂದೇ ಕಾರ್ಡ್‌?

ಜ.1ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲು ಬಿಎಂಆರ್‌ಸಿಎಲ್‌ ಚಿಂತನೆ
Last Updated 10 ಅಕ್ಟೋಬರ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಒಂದೇ ಕಾರ್ಡ್‌ ಬಳಕೆಯನ್ನು ಬರುವ ಜನವರಿ 1ರಿಂದ ತಾತ್ಕಾಲಿಕವಾಗಿ ಅನುಷ್ಠಾನಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

‘ನಮ್ಮ ಮೆಟ್ರೊ’ದ ಮೊದಲಹಂತದ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಡ್‌ ಪರಿಚಯಿಸಲು ಅಗತ್ಯ
ವಿರುವ ಎಎಫ್‌ಸಿ ಗೇಟ್‌ಗಳು ಮುಂದಿನ ತಿಂಗಳು ಪೂರೈಕೆ ಆಗಲಿವೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿ (ಬಿಇಎಲ್) ಹಾಗೂ ಸೆಂಟರ್ ಫಾರ್‌ ಡೆವಲಪ್‍ಮೆಂಟ್ ಅಡ್ವಾನ್ಸಸ್ಡ್‌ ಕಂಪ್ಯೂಟಿಂಗ್ (ಸಿಡಿಎಸಿ) ಜತೆಗೆ ನಿಗಮ ಕಳೆದ ವಾರ ಮಾತುಕತೆ ನಡೆಸಿದೆ.

ದೇಶದ ಯಾವುದೇ ಮೆಟ್ರೊದಲ್ಲಿ ಬಳಸುವ ಕಾರ್ಡ್‍ಗಳನ್ನು ಪ್ರಯಾಣಿಕರು ಬೆಂಗಳೂರಿನ ಮೆಟ್ರೊದಲ್ಲಿ ತೋರಿಸಿ ಸಂಚರಿಸಬಹುದು. ಅದೇ ಕಾರ್ಡ್‍ನಿಂದ ಬಿಎಂಟಿಸಿ ಬಸ್‍ಗಳಲ್ಲೂ ಓಡಾಡಬಹುದು. ಆದರೆ, ಬಿಎಂಟಿಸಿ ಇಟಿಎಂ ಅಪ್‍ಗ್ರೇಡ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಬೈಯಪ್ಪನಹಳ್ಳಿ ನಿಲ್ದಾಣದಿಂದ ಮೊದಲು ಈ ಕಾರ್ಡ್‌ ಬಳಕೆಗೆ ಉದ್ದೇಶಿಸಲಾಗಿದೆ.

ಕಾರ್ಡ್‌ ಬಳಸುವುದು ಹೇಗೆ?: ಮೆಟ್ರೊದಲ್ಲಿ ಈಗಿರುವ ಕಾಂಟಾಕ್ಟ್‌ಲೆಸ್‌ ಸ್ಮಾರ್ಟ್ ಕಾರ್ಡ್ ಕ್ಲೋಸ್ ಲೂಪ್ ವ್ಯವಸ್ಥೆ ಹೊಂದಿದೆ. ಅಂದರೆ, ಈ ಕಾರ್ಡ್ಅನ್ನು ಎಎಫ್‌ಸಿ ಗೇಟ್‍ನಲ್ಲಿ ಸ್ವೈಪ್ ಮಾಡಿದಾಗ, ಕಡಿತಗೊಳ್ಳುವ ಹಣ ನೇರವಾಗಿ ನಿಗಮದ ಖಾತೆಗೆ ಜಮೆ ಆಗುತ್ತದೆ. ಹಾಗಾಗಿ, ಅದನ್ನು ಬೇರೆ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಲು ಬರುವುದಿಲ್ಲ.

ಆದರೆ, ಮುಂದೆ ಬಳಕೆಗೆ ತರಲಾಗುತ್ತಿರುವ ‘ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್’ ಮುಕ್ತ ಲೂಪ್ ವ್ಯವಸ್ಥೆ ಹೊಂದಿದೆ. ಅದನ್ನು ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮೆ ಆಗುತ್ತದೆ. ಅಲ್ಲಿಂದ ಆಯಾ ಸಂಸ್ಥೆಗೆ ಹೋಗುತ್ತದೆ. ಈ ಸಂಬಂಧ ಬ್ಯಾಂಕ್‍ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಮಾಡಿಕೊಳ್ಳಲಾಗಿದೆ ಎಂದು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT