ಬಿಎಂಟಿಸಿ ಬಸ್ ಡಿಕ್ಕಿ ಮಹಿಳೆ ಸಾವು

ಬೆಂಗಳೂರು: ಹೆಬ್ಬಾಳ ವೃತ್ತದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರ ಮೇಲೆ ಬಿಎಂಟಿಸಿ ಬಸ್ ಹರಿದು ಮೃತಪಟ್ಟಿದ್ದಾರೆ. ಚಾಲಕನನ್ನು ಬಂಧಿಸಲಾಗಿದೆ.
ಕೆಂಪಾಪುರದ ನಿವಾಸಿ ಜಯಮ್ಮ (67) ಎಂಬುವವರು ಮೃತಪಟ್ಟವರು.
‘ಮಂಗಳವಾರ ಬೆಳಿಗ್ಗೆ 11.30ರಲ್ಲಿ ಜಯಮ್ಮ ಅವರು ರಸ್ತೆ ದಾಟುತ್ತಿದ್ದರು. ಅದೇ ವೇಳೆ ಬಿಎಂಟಿಸಿ ಬಸ್ ಮಾನ್ಯತಾ ಟೆಕ್ ಪಾರ್ಕ್ ಕಡೆಯಿಂದ ಡಿಪೊಗೆ ತೆರಳಲು ಯೂ ಟರ್ನ್ ಪಡೆದುಕೊಳ್ಳುತ್ತಿತ್ತು. ಜಯಮ್ಮ ಅವರು ರಸ್ತೆ ದಾಟುತ್ತಿರುವುದನ್ನು ಗಮನಿಸದ ಕಾರಣ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
ಬರಹ ಇಷ್ಟವಾಯಿತೆ?
1
0
0
0
0
0 comments
View All