ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ; ವಿದ್ಯುತ್‌ ಬಸ್‌ ನೇರ ಖರೀದಿ

Last Updated 17 ಫೆಬ್ರುವರಿ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಬಸ್‌ ಖರೀದಿ ಪ್ರಕ್ರಿಯೆಯನ್ನು ಫೆ. 28ರ ಒಳಗೆ ನಡೆಸದಿದ್ದರೆ ಸಬ್ಸಿಡಿ ವಾಪಸ್‌ ಪಡೆಯುವುದಾಗಿ ಕೇಂದ್ರ ಸರ್ಕಾರ ಎಚ್ಚರಿಸಿದ ಬೆನ್ನಲ್ಲೇ ಬಿಎಂಟಿಸಿ 150 ಬಸ್‌ಗಳನ್ನು ಖರೀದಿಸಲು ನಿರ್ಧರಿಸಿದೆ.

ಶನಿವಾರ ಬಿಎಂಟಿಸಿ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ನೇತೃತ್ವದಲ್ಲಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಸ್‌ಗಳನ್ನು ಗುತ್ತಿಗೆಗೆ ಪಡೆದು ಓಡಿಸುವುದು ಅಥವಾ ಖರೀದಿ ಮಾಡುವುದೋ ಎಂಬ ದ್ವಂದ್ವಕ್ಕೆ ನಿಗಮ ಕೊನೆಗೂ ತೆರೆಯೆಳೆದಿದೆ.

ಖರೀದಿಯೇ ಏಕೆ?

‘ಬಸ್‌ಗಳನ್ನು ಗುತ್ತಿಗೆಗೆ ನೀಡುವ ಕಂಪನಿ ಬಸ್‌ಗಳ ನಿರ್ವಹಣೆ, ವೆಚ್ಚದ ಬಗ್ಗೆ ಸ್ಪಷ್ಟಪಡಿಸಿರಲಿಲ್ಲ. ಈ ಕಂಪನಿ ತನ್ನದೇ ಚಾಲಕರನ್ನು ನಿಯೋಜಿಸುತ್ತದೆ. ಹೀಗಾದಾಗ ಸಂಸ್ಥೆಯ ಚಾಲಕರನ್ನೇನು ಮಾಡುವುದು? ಸಂಸ್ಥೆಯ ಉದ್ಯೋಗಿಗಳ ಹಿತದೃಷ್ಟಿಯಿಂದ ಬಸ್‌ಗಳನ್ನು ಖರೀದಿಸುವುದೇ ಉತ್ತಮ. ಸ್ಪರ್ಧಾತ್ಮಕ ದರದಲ್ಲಿ ಖರೀದಿಸುವಾಗ ಪ್ರತಿ ಬಸ್‌ನ ಬೆಲೆ ಇನ್ನೂ ಕಡಿಮೆಯಾಗಲಿದೆ’ ಎಂದು ನಿಗಮದ ಮೂಲಗಳು ಹೇಳಿವೆ.

ನಗರದಲ್ಲಿ ಬ್ಯಾಟರಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು. ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸುವ ಕುರಿತು ಬೆಸ್ಕಾಂ ಜತೆ ಚರ್ಚಿಸಲಾಗುವುದು. ಮೊದಲ ಹಂತವಾಗಿ 80 ಬಸ್‌ಗಳನ್ನು ಖರೀದಿಸಲಾಗುವುದು. ಬಸ್‌ಗಳನ್ನು ಪೂರೈಸುವ ಕಂಪನಿಯೇ ಚಾಲಕರಿಗೆ ತರಬೇತಿ ನೀಡಲಿದೆಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT