ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು' ಕೃತಿ ಬಿಡುಗಡೆ

ಬದುಕು ಸಂಸ್ಕೃತಿ ಕಟ್ಟಿಕೊಟ್ಟ ಕಥನ
Last Updated 2 ಡಿಸೆಂಬರ್ 2018, 18:40 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ಸಂಸ್ಕೃತಿ, ಆಡಳಿತ ವ್ಯವಸ್ಥೆ, ಧಾರ್ಮಿಕ ಪ್ರಭಾವ ಇತ್ಯಾದಿಗಳನ್ನು ಒಂದು ಕೃತಿಯಲ್ಲಿ ಕಟ್ಟಿಕೊಡುವುದು ಸವಾಲು’ ಎಂದು ಲೇಖಕ ಡಾ.ಕೆ.ಸತ್ಯನಾರಾಯಣ ಹೇಳಿದರು.

ವಿಕಾಸ ಪ್ರಕಾಶನ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅವರ ತಾಂಜಾನಿಯಾ ಪ್ರವಾಸ ಅನುಭವ ಕಥನ ‘ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಾಂಜಾನಿಯಾದ ಭಯಾನಕ ಪ್ರದೇಶಗಳಿಗೆ ಭೇಟಿ ನೀಡಿರುವ ಲೇಖಕಿ ಅಲ್ಲಿನ ಆಫ್ರಿಕನ್ ಬುಡಕಟ್ಟು ಸಮುದಾಯ ಅನುಭವಿಸಿರುವ ನೋವಿನ ಯಾತನೆ, ಗುಲಾಮಗಿರಿ ಪದ್ಧತಿ ಬಗ್ಗೆ ವಿವರವಾಗಿ ನಿರೂಪಿಸಿದ್ದಾರೆ. ಅಲ್ಲಿನ ರಾಜಕೀಯ ವ್ಯವಸ್ಥೆ, ಜನ ಸಂಸ್ಕೃತಿ ಮೇಲೆ ಇಸ್ಲಾಂ ಪ್ರಭಾವ ಇತ್ಯಾದಿಗಳ ಚಿತ್ರಣ ಕುತೂಹಲಕಾರಿಯಾಗಿವೆ. ಪ್ರವಾಸ ಕಥನಗಳು ವಿರಳವಾಗುತ್ತಿರುವ ಈ ದಿನಗಳಲ್ಲಿ ಕಗ್ಗತ್ತಲ ಖಂಡದೊಳಗೆ... ಕೃತಿ ಹೊರಬಂದಿರುವುದು ವಿಶೇಷ’ ಎಂದರು.

ಲೇಖಕಿ ಪ್ರೊ.ಎಂ.ಆರ್.ಕಮಲಾ ಮಾತನಾಡಿ, ಬುಡಕಟ್ಟು ಜನಾಂಗದ ಮಾನವಹಕ್ಕುಗಳನ್ನು ಕಸಿದುಕೊಂಡ ಬಗ್ಗೆ ಕೃತಿಯಲ್ಲಿ ಅದ್ಭುತವಾಗಿ ವಿಶ್ಲೇಷಿಸಲಾಗಿದೆ. ಮೊದಲ 25 ಪುಟಗಳಲ್ಲೇ ಅಲ್ಲಿನ ಸಂಸ್ಕೃತಿಯನ್ನು ಕಟ್ಟಿಕೊಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT