ಶುಕ್ರವಾರ, ಅಕ್ಟೋಬರ್ 18, 2019
28 °C
ಕೃತಿ ಬಿಡುಗಡೆ: ವಿಮರ್ಶಕ ಸಿ. ನಾಗಣ್ಣ ಅಭಿಮತ

‘ಬಹುಶಿಸ್ತೀಯ ಜ್ಞಾನ ಅಗತ್ಯ’

Published:
Updated:
Prajavani

ಬೆಂಗಳೂರು: ‘ಸಂಶೋಧಕರು ಮತ್ತು ಪ್ರಾಧ್ಯಾಪಕರು ಅಧ್ಯಯನ, ಅಧ್ಯಾಪನದಲ್ಲಿ ಬಹುಶಿಸ್ತೀಯ ಜ್ಞಾನ ಅಳ ವಡಿಸಿಕೊಳ್ಳಬೇಕು’ ಎಂದು ವಿಮರ್ಶಕ ಸಿ. ನಾಗಣ್ಣ ಅಭಿಪ್ರಾಯಪಟ್ಟರು. 

ಎನ್ಎಂಕೆಆರ್‌ವಿ ಮಹಿಳಾ ಕಾಲೇಜಿನ ಸಮನ್ವಯ ಬಿ.ಇಡಿ ವಿಭಾಗದ ಕನ್ನಡ ಸಂಘವು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಕನ್ನಡ ಸಾಹಿತ್ಯ: ವರ್ತಮಾನದ ಸವಾಲುಗಳು’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘ಸಂಶೋಧನೆಗಳು ಬಹುಶಿಸ್ತೀಯ ಜ್ಞಾನದ ನೆಲೆಯಲ್ಲಿ ರೂಪಿತವಾದರೆ ಅದರಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಹಾಗಾಗಿ  ಏಕಶಿಸ್ತು ಅಳವಡಿಸಿಕೊಳ್ಳುವುದನ್ನು ಕೈಬಿಡಬೇಕು’ ಎಂದು ಪ್ರಾಧ್ಯಾಪಕರಿಗೆ ಅವರು ಕಿವಿಮಾತು ಹೇಳಿದರು. 

ಚಿಂತಕ ಹೊಂಬಯ್ಯ, ‘ಕೃತಿಯ ಎರಡು ಸಂಪುಟಗಳಲ್ಲಿ 143 ಲೇಖನಗಳಿದ್ದು, ಈ ಲೇಖನಗಳು ವಿಭಿನ್ನ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸಹೃದಯರಲ್ಲಿ ವಿವೇಚನೆ ಅತ್ಯಧಿಕ ಗೊಳಿಸುತ್ತದೆ’ ಎಂದರು.

Post Comments (+)