ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರು ಮಾಡಬೇಕಾದುದು: ಮತದಾರರ ಸಲಹೆ

Last Updated 26 ಮೇ 2019, 20:04 IST
ಅಕ್ಷರ ಗಾತ್ರ

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಸೌಂದರ್ಯ ಉಳಿಸಿ ಬೆಳೆಸಲು ನೂತನವಾಗಿ ಆಯ್ಕೆಯಾದ ಸಂಸದರು ಮಾಡಬೇಕಾದುದು ಏನು? ಎನ್ನುವ ಕುರಿತು ಮತದಾರರು ಸಲಹೆಗಳನ್ನು ನೀಡಿದ್ದು, ಅದರಲ್ಲಿಯ ಕೆಲವು ಸಲಹೆಗಳು ಇಲ್ಲಿವೆ.

ಕನ್ನಡ ಶಾಲೆ ಅಭಿವೃದ್ಧಿಪಡಿಸಲಿ

‘ನೂತನ ಸಂಸದರು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಶ್ರಮಿಸಬೇಕು. ಕನ್ನಡ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಶಿಕ್ಷಕಿಯರಿಗೆ ಸೃಜನಶೀಲತೆಯ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸಿ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸಬೇಕು’

–ವಿಶಾಲ ಆರಾಧ್ಯ,ಬೊಮ್ಮಸಂದ್ರ

ಸ್ವಚ್ಛತೆಗೆ ಮಹತ್ವ ನೀಡಬೇಕು

‘ನಗರದ ಸೌಂದರ್ಯವನ್ನು ಉಳಿಸಿ ಬೆಳೆಸಲು ಸ್ವಚ್ಛತೆಯನ್ನು ಕಾಪಾಡುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ನೂತನ ಸಂಸದರು ಬೇರೆ ರಾಜ್ಯಗಳಲ್ಲಿ ಸ್ವಚ್ಛತೆಗೆ ಅನುಸರಿಸುತ್ತಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಿ ಅವುಗಳನ್ನು ನಮ್ಮಲ್ಲೂ ಜಾರಿಗೊಳಿಸಲು ಶ್ರಮಿಸಬೇಕು’

–ಎಚ್.ಎಸ್.ಶ್ರೀಮತಿ, ಜಯನಗರ

ಪರಿಸರಕ್ಕೆ ಆದ್ಯತೆ

‘ನೂತನ ಸಂಸದರು ಪರಿಸರ ಸಂರಕ್ಷಣೆಗೆ ಮಹತ್ವ ನೀಡಬೇಕು. ಮರಗಳನ್ನು ಬೆಳೆಸುವುದರ ಮೂಲಕ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಗ್ಗಿಸಲು ಶ್ರಮಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಬಳಿ ತೆಗೆದುಕೊಂಡು ಬರಬೇಕು. ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು’

–ಸಂತೋಷ್ ಹ. ರಾಯ್ಕರ್, ರಾಜಾಜಿನಗರ

ತಿಂಗಳಿಗೊಮ್ಮೆ ಸಭೆ ನಡೆಸಬೇಕು

‘ನೂತನವಾಗಿ ಆಯ್ಕೆಯಾದ ಸಂಸದರುನಗರಕ್ಕೆ ಮೂಲಸೌಕರ್ಯ ಒದಗಿಸುವ ಕಡೆ ಗಮನಹರಿಸಬೇಕು. ತಿಂಗಳಿಗೊಮ್ಮೆ ಶಾಸಕರು, ಸ್ಥಳೀಯ ಸಂಸ್ಥೆಗಳ ಸದಸ್ಯರ ಸಭೆ ನಡೆಸಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕು. ಅವರಿಂದ ವರದಿ ತರಸಿಕೊಂಡು ಕ್ಷೇತ್ರದಲ್ಲಿ ಆಗುತ್ತಿರುವ ಕಾಮಗಾರಿಗಳ ಕುರಿತು ತಿಳಿದುಕೊಳ್ಳಬೇಕು’

–ಟಿ.ತೇಜ, ಬೆಂಗಳೂರು ಉತ್ತರ

ಗ್ರೀನ್‌ ಬೆಂಗಳೂರು ಬೇಕು

‘ನಮಗೆ ಬೇಕಾದದ್ದು ಬ್ರ್ಯಾಂಡ್ ಬೆಂಗಳೂರಲ್ಲ, ಹಸಿರು ಬೆಂಗಳೂರು. ಮೆಟ್ರೊ ಸೇರಿದಂತೆ ವಿವಿಧ ಯೋಜನೆಗಳಿಂದ ಬೆಂಗಳೂರಿನ ಮರಗಳು ನಾಶವಾಗುತ್ತಿದೆ. ಹೀಗಾಗಿ ನಗರದ ತಾಪಮಾನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಮನೆಯೊಂದಿದ್ದರೆ ಸಾಕು ಎಂದವರು ಇದೀಗ ನಮ್ಮೂರೇ ಲೇಸು ಎನ್ನುತ್ತಿದ್ದಾರೆ’

–ಹರೀಶ್ ರಾಮಸ್ವಾಮಿ, ಆನೇಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT