ಶನಿವಾರ, ನವೆಂಬರ್ 16, 2019
21 °C

ಬಿಬಿಎಂಪಿಗೆ ಶೆನ್‌ಜೆನ್‌ ನಗರದ ನಿಯೋಗ ಭೇಟಿ

Published:
Updated:

ಬೆಂಗಳೂರು: ಚೀನಾದ ಶೆನ್‌ಜೆನ್ ಮುನಿಸಿಪಲ್ ಪೀಪಲ್ಸ್ ಗವರ್ನಮೆಂಟ್‌ನ ನಿಯೋಗವು ಮಂಗಳವಾರ ಬಿಬಿಎಂಪಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ವಿಚಾರ ವಿನಿಮಯ ನಡೆಸಿತು.

ಬಿಬಿಎಂಪಿ ಆಯುಕ್ತ‌ ಬಿ.ಎಚ್. ಅನಿಲ್ ಕುಮಾರ್ ಹಾಗೂ ಪಾಲಿಕೆಯ ಅಧಿಕಾರಿಗಳನ್ನು ಭೇಟಿಯಾದ ಶೆನ್‌ಜೆನ್‌ನ ವೈಸ್‌ ಮೇಯರ್‌ ಯಾಂಗ್ ಹಾಂಗ್ ನೇತೃತ್ವದ 7 ಸದಸ್ಯರ ನಿಯೋಗ, ಉಭಯ ನಗರಗಳು ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಸಮಾಲೋಚನೆ ನಡೆಸಿತು. 

‘ಚೀನಾದ ಶೆನ್‌ಜೆನ್ ನಗರದ  ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 5ಜಿ ತಂತ್ರಜ್ಞಾನದ ನೆರವಿನಿಂದ ಗ್ರಾಹಕ ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಕಸದಿಂದ ವಿದ್ಯುತ್ ಉತ್ಪಾದಿಸುವ ವಿಧಾ ನ, ಕೈಗಾರಿಕಾ ವಲಯಗಳಿಗೆ ಮೂಲಭೂತ ಸೌಕರ್ಯ, ರಸ್ತೆ, ಸಾಫ್ಟ್‌ವೇರ್ ಪಾರ್ಕ್ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರು ಮಾಹಿತಿ ನೀಡಿದರು.  ಶೆನ್‌ಜೆನ್‌ಗೆ ಬರುವಂತೆ ಪಾಲಿಕೆ ಅಧಿಕಾರಿಗಳಿಗೆ ಆಹ್ವಾನ ನೀಡಿದರು.

ಉದ್ಯಾನನಗರಿ ಬೆಂಗಳೂರು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ಬೆಳೆದ ಬಗೆಯನ್ನು ಅನಿಲ್ ಕುಮಾರ್ ವಿವರಿಸಿದರು.

ಪ್ರತಿಕ್ರಿಯಿಸಿ (+)