ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕುಸಿತ: ಮಾಲೀಕರ ವಿರುದ್ಧ ದೂರು

ಪರಾರಿಯಾದ ಕಾರ್ತಿಕ್‌ಗಾಗಿ ಪೊಲೀಸರ ಹುಡುಕಾಟ
Last Updated 11 ನವೆಂಬರ್ 2018, 19:25 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಗರಾಜನಗರದಲ್ಲಿ ಶನಿವಾರ ಕುಸಿದ ನಾಲ್ಕು ಅಂತಸ್ತಿನ ಕಟ್ಟಡದ ಮಾಲೀಕ ಕುಮಾರ್‌ ಮತ್ತು ಪಕ್ಕದ ಖಾಲಿ ಜಾಗದಲ್ಲಿ ಪಾಯ ತೋಡಿಸುತ್ತಿದ್ದ ಕಾರ್ತಿಕ್‌ಅಲಿಯಾಸ್‌ ಸುಬ್ರಹ್ಮಣ್ಯ ವಿರುದ್ಧ ಬಸವನಗುಡಿಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತ ಕಾರ್ಮಿಕ ಸುಫೇಲ್‌ ಅವರ ಸ್ನೇಹಿತ ಶಬೀರ್‌ ಹಾಗೂ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಖಾಲಿ ಜಾಗದ ಮಾಲೀಕ ಕಾರ್ತಿಕ್‌ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

‘ಕಟ್ಟಡದಶೇ 90ರಷ್ಟು ಭಾಗವನ್ನು ತುಂಬಾ ಜಾಗರೂಕತೆಯಿಂದ ಒಡೆದಿದ್ದೇವೆ. ಕಟ್ಟಡದ ಅವಶೇಷಗಳನ್ನು ಡಂಪಿಂಗ್‌ ಯಾರ್ಡ್‌ಗೆ ಸೋಮವಾರದಿಂದ ಸಾಗಿಸುತ್ತೇವೆ’ ಎಂದು ಪಾಲಿಕೆಯ ದಕ್ಷಿಣ ವಲಯದ ಜಂಟಿ ಆಯುಕ್ತ ಡಾ. ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಅವಘಡದಿಂದ ಪಕ್ಕದಲ್ಲಿನ ರುದ್ರಾಕ್ಷಿ ಅಪಾರ್ಟ್‌ಮೆಂಟ್‌ಗೂ ಧಕ್ಕೆ ಆಗಿದ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT