ಮಂಗಳವಾರ, ಏಪ್ರಿಲ್ 20, 2021
24 °C
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‌ ಕಾಯ್ದೆಯ 491ನೇ ಕಲಂ ಅನುಷ್ಠಾನ ಏಕಿಲ್ಲ – ಜನರ ಪ್ರಶ್ನೆ

‘ಹೊಟ್ಟೆ ಬೆಳೆದಿದೆ, ಕೈ ಕಾಲು ದುರ್ಬಲವಾಗಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಪೌರಾಡಳಿತಕ್ಕೆ ಸಂಬಂಧಿಸಿದ ನಿಯಮಗಳಿಗೆ ಸಂಬಂಧಿಸಿದಂತೆ ಪೊಲೀಸರಂತೆ ಕಾರ್ಯನಿರ್ವಹಿಸಲು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‌ (ಕೆಎಂಸಿ) ಕಾಯ್ದೆ 1976ರ ಕಲಂ 491 ಅವಕಾಶ ಕಲ್ಪಿಸುತ್ತದೆ. ಈ ಕಾನೂನು ರಚನೆಯಾಗಿ 43 ವರ್ಷಗಳ ಬಳಿಕವೂ ಇದನ್ನು ಅನುಷ್ಠಾನಗೊಳಿಸಿಲ್ಲ ಏಕೆ?

ಪೌರಾಡಳಿತ ನಿರ್ದೇಶನಾಲಯದ ನಿವೃತ್ತ ಜಂಟಿ ನಿರ್ದೇಶಕ ಶಿ.ರಾ.ಗಾರವಾಡ ಅವರ ಪ್ರಶ್ನೆ ಇದು.

ಕೆಎಂಸಿ ಕಾಯ್ದೆಯ ಕಲಂ 491 ಅನ್ನು ಜಾರಿ ಮಾಡುವಂತೆ 14ನೇ ವಿಧಾನಸಭೆಯ ಅರ್ಜಿ ಸಮಿತಿಯು 2015ರಲ್ಲಿ ಸಲ್ಲಿಸಿದ್ದ 19ನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಇದಾಗಿ ನಾಲ್ಕು ವರ್ಷ ಕಳೆದರೂ ಶಿಫಾರಸು ಜಾರಿಯಾಗಿಲ್ಲ ಎನ್ನುತ್ತಾರೆ ಅವರು.

‘ಕೆಎಂಸಿ ಕಾಯ್ದೆಯ 489, 490, 491 ಹಾಗೂ 492 ಕಲಂಗಳನ್ನು ಸರಿಯಾಗಿ ಬಳಸಿದರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಕ್ರಮಗಳನ್ನು ತಡೆಯಬಹುದು. ಯಾವುದೇ ವ್ಯಕ್ತಿ ಈ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ ಪೊಲೀಸರು ನಗರಾಡಳಿತ ಸಂಸ್ಥೆಗಳ ಅಧಿಕಾರಿಗಳ ಗಮನಕ್ಕೆ ತರಬಹುದು. ಉಲ್ಲಂಘನೆ ತಡೆಯಲು ನಗರಾಡಳಿತ ಸಂಸ್ಥೆಗಳ ಅಧಿಕಾರಿಗಳು ನೀಡುವ ನಿರ್ದೇಶನವನ್ನು ಪೊಲೀಸರೂ ಪಾಲಿಸಬೇಕು ಎಂದು ಈ ಕಲಂಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ವಿವರಿಸಿದರು.

‘ಇಂದಿನ ನಗರಾಡಳಿತ ವ್ಯವಸ್ಥೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊಟ್ಟೆ ಬೆಳೆದಿದೆ. ಆದರೆ, ಕೈ ಕಾಲುಗಳು ದುರ್ಬಲವಾಗಿವೆ. ಅದಕ್ಕೆ ವಿಶೇಷ ಚಿಕಿತ್ಸೆಯ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಆಡಳಿತ ಸುಧಾರಣಾ ಆಯೋಗವನ್ನು ರಚಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ವೈಖರಿಯಲ್ಲಿ ಮಾರ್ಪಾಡು ತರುವ ಪ್ರಯತ್ನ ನಡೆಯಬೇಕು’ ಎಂದು ಅವರು ಒತ್ತಾಯಿಸಿದರು.

‘ಬಿಲ್ಡರ್‌ಗಳಿಗೂ ಪರವಾನಗಿ ಕಡ್ಡಾಯವಾಗಲಿ’

‘ನಿರ್ಮಾಣ ಎಂಜಿನಿಯರ್‌ಗಳು, ವಾಸ್ತು ಶಿಲ್ಪಿಗಳು ಸರ್ಕಾರದಿಂದ ಪರವಾನಗಿ ಪಡೆಯಬೇಕು. ಎಲ್ಲರೂ ಪ್ರತಿ ಐದು ವರ್ಷಕ್ಕೊಮ್ಮೆ ಅದನ್ನು ನವೀಕರಿಸಬೇಕು. ಆದರೆ, ಬಿಲ್ದರ್‌ಗಳ ಅರ್ಹತೆ ಪರಿಗಣಿಸಲು ಯಾವುದೇ ಮಾನದಂಡಗಳಿಲ್ಲ. ದುಡ್ಡಿದ್ದವರು ಯಾರು ಬೇಕಾದರೂ ಬಿಲ್ಡರ್‌ಗಳಾಗಬಹುದು. ಈ ವ್ಯವಸ್ಥೆ ಸರಿಯಲ್ಲ’ ಎನ್ನುತ್ತಾರೆ ವಾಸ್ತುಶಿಲ್ಪಿ ನರೇಶ್‌ ನರಸಿಂಹನ್‌ ‘ಕಟ್ಟಡ ದುರಂತ ಸಂಭವಿಸಿದಾಗಲೆಲ್ಲ ವಾಸ್ತುಶಿಲ್ಪಿಗಳು ಹಾಗೂ ನಿರ್ಮಾಣ ಎಂಜಿನಿಯರ್‌ಗಳನ್ನು ಗುರಿಮಾಡಲಾಗುತ್ತದೆ. ಅದರ ಜೊತೆಗೆ ಬಿಲ್ಡರ್‌ಗಳಿಗೂ ಉತ್ತರದಾಯಿತ್ವ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ತಂದರೆ ಕಟ್ಟಡಗಳ ಗುಣಮಟ್ಟ ಕಳಪೆಯಾಗುವ ಪ್ರಮೇಯ ಎದುರಾಗದು. ಕಟ್ಟಡ ನಿರ್ಮಾಣಕ್ಕೆ ಹೂಡಿಕೆ ಮಾಡುವವರೂ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಅವರು ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು