ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಆರಂಭ

Last Updated 20 ಅಕ್ಟೋಬರ್ 2018, 9:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣದ ವರೆಗಿನ ನಗರ ಬಸ್ ಸೇವೆಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಶನಿವಾರ ಚಾಲನೆ ನೀಡಿದರು.

‘ಪ್ರತಿ ದಿನ 15 ವಿಮಾನಗಳು ಹಾರಾಟ ನಡೆಸುತ್ತಿದ್ದು, ಸಾಮಾನ್ಯ ಜನರು ಸಹ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಆರಂಭಿಸಲಾಗಿದೆ. ದುಬಾರಿ ಬಾಡಿಗೆ ನೀಡಿ ಕಾರಿನಲ್ಲಿ ಬರಲಾಗದ ಪ್ರಯಾಣಕರಿಗೆ ಇದರಿಂದ ಅನುಕೂಲವಾಗಲಿದೆ. ಒಟ್ಟು 14 ಬಸ್‌ ಶೆಡ್ಯೂಲ್ ಇದ್ದು, ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ನೋಡಿಕೊಂಡು, ಅದನ್ನು ವಿಸ್ತರಣೆ (ವಿವಿಧ ಬಡಾವಣೆಗಳಿಗೆ) ಮಾಡಲಾಗುವುದು. ಮಿನಿ ಬಸ್ ಸೇವೆ ಸಹ ಆರಂಭಿಸಲಾಗುವುದು’ ಎಂದು ದೇಶಪಾಂಡೆ ಹೇಳಿದರು.

ಬಿಆರ್‌ಟಿಎಸ್‌ನಿಂದ ಸಾಮಾನ್ಯ ಸಾರಿಗೆಗೆ ಆಗಿರುವ ತೊಂದರೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಪ್ರಾಯೋಗಿಕವಾಗಿ ಈಗ ಬಿಆರ್‌ಟಿಎಸ್ ಬಸ್‌ಗಳು ಓಡಾಡುತ್ತಿವೆ. ಈ ಹಂತದಲ್ಲಿ ಏನೆಲ್ಲ ಸಮಸ್ಯೆ ಎದುರಾಗುತ್ತವೆ ಎಂಬುದನ್ನು ನೋಡಿಕೊಂಡು ಸರಿಪಡಿಸಲಾಗುವುದು ಎಂದರು.

ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಅದನ್ನು ಪಾಲಿಸಬೇಕು. ಮಹಿಳೆಯರ ಗೌರವಕ್ಕೆ ಧಕ್ಕೆ ಬರಬಾರದು ಹಾಗೂ ಅವರಿಗೆ ಅನ್ಯಾಯ ಆಗಬಾರದು ಎಂದರು.

ಖಾಲಿ ಬಸ್ ಓಡಿಸಬೇಡಿ: ಬೆಂಗಳೂರಿಗೆ ಬೆಳಗಿನ ಹೊತ್ತು ಬಸ್ ಓಡಿಸಬೇಡಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಬೆಳಿಗ್ಗೆ ಖಾಲಿ ಬಸ್‌ಗಳು ಓಡಾಡುತ್ತಿದ್ದು, ಅದರಿಂದಾಗಿ ನಿಗಮಕ್ಕೆ ನಷ್ಟವಾಗುತ್ತಿದೆ. ಚಾಲಕ– ನಿರ್ವಾಹಕರಿಗೆ ಅನುಕೂಲ ಮಾಡಿಕೊಡಲು ಅಥವಾ ಇನ್ಯಾವುದೇ ದುರುದ್ದೇಶದಿಂದ ವಿನಾಕಾರಣ ಬಸ್ ಓಡಿಸಬೇಡಿ ಎಂದು ಸೂಚನೆ ನೀಡಿದರು.

ಶಾಸಕ ಪ್ರಸಾದ್ ಅಬ್ಬಯ್ಯ, ವಾಯಮ್ಯ ಸಾರಿಗೆ ನಿಗಮದ ಅಧ್ಯಕ್ಷ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ದೀಪಾ ಚೋಳನ್ ಇದ್ದರು. ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ₹25 ಟಿಕೆಟ್ ದರ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT