ಇಂದು ನೀರು ಪೂರೈಕೆ ವ್ಯತ್ಯಯ

7

ಇಂದು ನೀರು ಪೂರೈಕೆ ವ್ಯತ್ಯಯ

Published:
Updated:

ಬೆಂಗಳೂರು: ಕಾವೇರಿ ನೀರು ಪೂರೈಕೆಯ 2 ಮತ್ತು 3ನೇ ಹಂತದ ಕೇಂದ್ರಗಳಲ್ಲಿ ವಿದ್ಯುತ್‌ ಉಪಕರಣಗಳ ಜೋಡಣಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಹಾಗಾಗಿ ಫೆ.8ರಂದು ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ, ಜಯಮಹಲ್‌, ವಸಂತನಗರ, ಆರ್‌.ಟಿ.ನಗರ, ಸದಾಶಿವ ನಗರ, ಹೆಬ್ಬಾಳ, ಭಾರತಿನಗರ, ಪ್ಯಾಲೇಸ್‌ ಗುಟ್ಟಳ್ಳಿ, ಫ್ರೇಜರ್‌ಟೌನ್‌, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡ ನಗರ, ಬನ್ನಪ್ಪ ಪಾರ್ಕ್‌, ಶಿವಾಜಿನಗರ, ಜೀವನ್‌ ಬಿಮಾ ನಗರ, ಗವಿಪುರ, ಬ್ಯಾಟರಾಯನಪುರ, ಮೆಜಿಸ್ಟಿಕ್‌, ಮಡಿವಾಳ, ಯಲಚೇನಹಳ್ಳಿ, ನೀಲಸಂದ್ರ, ಕೆ.ಆರ್‌.ಮಾರುಕಟ್ಟೆ, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ, ಲಿಂಗರಾಜಪುರ, ಆಡಗೋಡಿ, ದೊಮ್ಮಲೂರು, ಬಿಟಿಎಂ ಬಡಾವಣೆ, ಶ್ರೀರಾಂಪುರ, ಇಂದಿರಾನಗರ, ಹಲಸೂರು, ಶಾಂತಿನಗರ, ಕೋರಮಂಗಲ, ವಿಜಯನಗರ, ವಿ.ವಿ.ಪುರ, ಚಿಕ್ಕಪೇಟೆ, ಗಾಂಧಿನಗರ ಹಾಗೂ ಎಂ.ಜಿ.ರಸ್ತೆ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !